Skip to content Skip to footer

ಕನ್ನಡ ರಾಜ್ಯೋತ್ಸವ ಆಚರಣೆ

ಸಾವಿರಾರು ವರ್ಷಗಳಿಂದ ಸಾಂಸ್ಕೃತಿಕವಾಗಿ ಹಾಗೂ ರಾಜಕೀಯವಾಗಿ ತನ್ನದೇ ಆದ ಪರಂಪರೆಯನ್ನು ಹೊಂದಿರುವ ಕರ್ನಾಟಕವನ್ನು ಕನ್ನಡಿಗರು ಪಡೆಯಲು ದೀರ್ಘವಾದ ಏಕೀಕರಣದ ಹೋರಾಟವನ್ನೆ ನಡೆಸಿದ್ದಾರೆ. ಕನ್ನಡ ಆಡು ಭಾಷೆಯಾಗಿರದೇ, ಶಿಕ್ಷಣದ, ಮಾಧ್ಯಮದ ಭಾಷೆಯಾಗಿರದೇ ಶೋಚನೀಯ ಸ್ಥಿತಿಯಲ್ಲಿದ್ದ ಕನ್ನಡಿಗರನ್ನು ಮುಕ್ತಗೊಳಿಸಿ ಒಂದುಗೂಡಿಸುವುದೇ ಕರ್ನಾಟಕದ ಏಕೀಕರಣದ ಚಳುವಳಿಗೆ ಮೂಲ ಕಾರಣವಾಯಿತು . ಕನ್ನಡದ ಕುಲ ಪುರೋಹಿತರೆಂದೇ ಖ್ಯಾತರಾಗಿದ್ದ ಆಲೂರು ವೆಂಕಟರಾಯರ ‘ಕರ್ನಾಟಕ ಗತವೈಭವ’ ಗ್ರಂಥದಿಂದ ಪ್ರಭಾವಿತಗೊಂಡು ಕನ್ನಡಿಗರು ಆಂದೋಲನದಲ್ಲಿ ಸಕ್ರಿಯವಾಗಿ ಪಾಲ್ಗೊಂಡರು, ಮೈಸೂರ್ ಪ್ರಾಂತ್ಯವಾಗಿದ್ದ ನಮ್ಮ ರಾಜ್ಯ ‘ವಿಶಾಲ ಕರ್ನಾಟಕ’ ರಾಜ್ಯವೆಂದು ಮಂತ್ರಿಗಳಾದ ದೇವರಾಜ್ ಅರಸ್ ಅವರ ನೇತೃತ್ವದಲ್ಲಿ ಮರು ನಾಮಕರಣಗೊಂಡು ೫೦ವರ್ಷಗಳೇ ಸಂದಿತು. ಕನ್ನಡಕ್ಕಾಗಿ ಸ್ವಾಭಿಮಾನಿ ಕನ್ನಡಿಗರ ಚಳುವಳಿ ಇಂದು ನಾವು ಕನ್ನಡ ತಾಯ ತೇರ ಎಳೆಯಲು ಅನುವು ಮಾಡಿಕೊಟ್ಟಿದೆ, ಹೆತ್ತ ತಾಯಿಯಂತೆ ಕನ್ನಡ ತಾಯಿ ಪೂಜ್ಯಳು , ಮಾನ್ಯಳು. ಅತೀ ಮಧುರ ಅಮ್ರ ರುಚಿ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಲು ನಾವೆಲ್ಲರೂ ಒಗಟ್ಟಾಗಿರೋಣವೆಂದು ಕಾರ್ಯಕ್ರಮವನ್ನು ಉದ್ಘಾಟಿಸಿ, ಕನ್ನಡಾಂಬೆಗೆ ಪುಷ್ಪಾರ್ಚನೆ ಮಾಡಿ ಎಸ್.ಡಿ. ಎಂ ಪದವಿ ಕಾಲೇಜಿನ ಕನ್ನಡ ಉಪನ್ಯಾಸಕರಾದ ಮಹಾವೀರ ಜೈನ್ ಇಚ್ಲಂಪಾಡಿ ಇವರು ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಸುನಿಲ್ ಪಂಡಿತ್ ಅವರು ಭಾಷೆಯೆಂದರೆ ಸಂಸ್ಕಾರ, ಹಾಗಾಗಿ ಜೀವನದಲ್ಲಿ ಮೌಲ್ಯ ತುಂಬಿದ ಗುಣಗಳು ವ್ಯಕ್ತಿಯನ್ನು ಸದೃಢಗೊಳಿಸುವುದು ಎಂದು ಕನ್ನಡ ಭಾಷೆ ಹಾಗೂ ಬದುಕಿನ ನಡೆಯ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು. ಕನ್ನಡ ವಿಷಯದಲ್ಲಿ ಅತ್ಯಧಿಕ ಅಂಕ ಪಡೆದ ವಿದ್ಯಾರ್ಥಿಗಳಿಗೆ ಹಾಗೂ ತರಗತಿವಾರು ನಡೆಸಿದ ಕನ್ನಡ ಕುರಿತಾದ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು. ವಿದ್ಯಾರ್ಥಿಗಳು ನಾಡಗೀತೆ ಹಾಗೂ ಕನ್ನಡದ ಗೀತೆಗಳನ್ನು ಹಾಡಿದರು, ಕನ್ನಡ ಸ್ವರಚಿತ ಕವನಗಳನ್ನು ವಾಚಿಸಿದರು.

ವೇದಿಕೆಯಲ್ಲಿ ಉಪಪ್ರಾಂಶುಪಾಲರಾದ ಮನೀಶ್ ಕುಮಾರ್, ಕಾಲೇಜಿನ ಸಾಂಸ್ಕೃತಿಕ ಹಾಗೂ ಸಾಹಿತಿಕ ಸಂಘದ ಸoಯೋಜನಾಧಿಕಾರಿ ಹಾಗೂ ಇಂಗ್ಲೀಷ್ ಉಪನ್ಯಾಸಕ ಪಾರ್ಶ್ವನಾಥ್ , ಕನ್ನಡ ಉಪನ್ಯಾಸಕಿ ಕವಿತಾ ಉಮೇಶ್ ಉಪಸ್ಥಿತರಿದ್ದರು. ಪ್ರಥಮ ವರ್ಷದ ವಿದ್ಯಾರ್ಥಿ ಮಿಥುನ್ ಸ್ವಾಗತಿಸಿದರು. ದ್ವಿತೀಯ ವರ್ಷದ ವಿದ್ಯಾರ್ಥಿ ಅಕ್ಷಯ್ ವಂದಿಸಿದರು ಹಾಗೂ ಪೂರ್ವಿಕ್ ನಿರೂಪಿಸಿದರು.

Leave a comment

ಜಾಗತಿಕ ಕೈ ತೊಳೆಯುವ ದಿನ

ಕಾಲೇಜಿನ ವಿದ್ಯಾರ್ಥಿಗಳಿಗೆ ಕೈ ತೊಳೆಯುವ ವಿಧಾನದ ಪ್ರಾತ್ಯಕ್ಷಿಕೆಯನ್ನು ಏರ್ಪಡಿಸಲಾಗಿತ್ತು. ಸಂಪನ್ಮೂಲ ವ್ಯಕ್ತಿಗಳಾಗಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ. ಪೂ ಕಾಲೇಜಿನ ಸಂಸ್ಕೃತ ವಿಭಾಗದ ಮುಖ್ಯಸ್ಥ ಡಾ.ಪ್ರಸನ್ನ ಕುಮಾರ್ ಐತಾಳ್ ಆಗಮಿಸಿ ಕೈ ತೊಳೆಯುವ ಪ್ರಾಮುಖ್ಯತೆಯನ್ನು ವಿದ್ಯಾರ್ಥಿಗಳಿಗೆ ವಿವರಿಸಿ ಪ್ರಾತ್ಯಕ್ಷಿಕೆ ನೀಡಿದರು. ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಶ್ರೀ ಸುನಿಲ್ ಪಂಡಿತ್ ಆರೋಗ್ಯಕರ ಬದುಕಿನಲ್ಲಿ ಕೈ ತೊಳೆಯುವ ಅಗತ್ಯತೆ ಹಾಗೂ ಅದರ ಮಹತ್ವವನ್ನು ಹೇಳಿದರು. ಉಪಪ್ರಾಂಶುಪಾಲ ಮನೀಶ್ ಕುಮಾರ್ ಮತ್ತು ಸಂಸ್ಕೃತ ವಿಭಾಗದ ಉಪನ್ಯಾಸಕ ಮಹೇಶ್ ಎಸ್. ಎಸ್ ಉಪಸ್ಥಿತರಿದ್ದರು.

Leave a comment

ಪೂಜ್ಯ ಹೆಗ್ಗಡೆಯವರ 75ನೇ ಹುಟ್ಟುಹಬ್ಬದ ಸವಿನೆನಪಿನ ಸಂಭ್ರಮ’

ಪೂಜ್ಯ ಖಾವಂದರ ಸಾಧನೆ ಗಳನ್ನು ವಿವರಿಸುವುದೆಂದರೆ ಸಮುದ್ರದಿಂದ ಒಂದು ಪಾತ್ರೆಯಲ್ಲಿ ನೀರು ತೆಗೆದಂತೆ,ಅವರ ಕೆಲಸಗಳೇ ಸಾಧನೆಯಾಗಿ ಮನೆ ಮಾತಾಗಿದೆ. ಅವರು ಹಾಕಿಕೊಟ್ಟ ಮಾರ್ಗ ಪ್ರೇರಕ ಪೂರಕ ಸ್ಫೂರ್ತಿದಾಯಕ. ಅವರು ತಮ್ಮನ್ನು ಸಮಾಜದ ಏಳ್ಗೆಗಾಗಿಯೇ ತೊಡಗಿಸಿಕೊಂಡಿದ್ದಾರೆ. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಹೊಸತನದೊಂದಿಗೆ ನಿರಂತರ ಕಾರ್ಯ ಪ್ರವೃತರಾಗಿರುವುದು ಅನಿವಾರ್ಯ ಹಾಗೂ ಅಗತ್ಯ. ಇದನ್ನು ಮನಗಂಡೇ ಅನೇಕ ಹೊಸ ಹೊಸ ಯೋಜನೆಗಳ ಮೂಲಕ ನಾಡನ್ನು ಕಟ್ಟುವ ಕಾರ್ಯ ಮಾಡುತ್ತಿದ್ದಾರೆ. ಪೂಜ್ಯರ ಹುಟ್ಟುಹಬ್ಬವನ್ನು ಅವರ ಸಾಧನೆಗಳ ಕುರಿತಾದ ಸ್ಪರ್ಧೆಗಳನ್ನು ಏರ್ಪಡಿಸಿ ವಿಶೇಷ ರೀತಿಯಲ್ಲಿ ಆಚರಿಸಿದ ಕಾಲೇಜಿನ ಕಾರ್ಯ ಶ್ಲಾಘನೀಯ ಎಂದ ಶ್ರೀಮತಿ ಸೋನಿಯಾವರ್ಮಾ ಅವರು ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಿ ಶುಭಾಶಯ ಕೋರಿದರು.

ಪೂಜ್ಯ ಹೆಗ್ಗಡೆಯವರ ಬದುಕು ತಮ್ಮ ಜೀವನಕ್ಕೆ ದಾರಿದೀಪವಾದ ಬಗೆಯನ್ನು ನೈಜ ಅನುಭವಗಳ ಮೂಲಕ ಕಾಲೇಜಿನ ಪ್ರಾಂಶುಪಾಲರಾದ ಶ್ರೀಯುತ ಸುನಿಲ್ ಪಂಡಿತರು ವಿಧ್ಯಾರ್ಥಿಗಳೊಂದಿಗೆ ಹಂಚಿ ಕೊಂಡರು. ಇದೇ ಸಂದರ್ಭದಲ್ಲಿ ಗ್ರಂಥಾಲಯವನ್ನು ಸಮರ್ಥವಾಗಿ ಬಳಸುವ ವಿದ್ಯಾರ್ಥಿಗೆ 5 ಸಾವಿರ ನಗದು ಬಹುಮಾನ ವನ್ನು. ಕೀರ್ತಿಶೇಷ ಯಶೋವರ್ಮರ ಸ್ಮರಣಾರ್ಥ ಘೋಷಿಸಲಾಯಿತು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿಗಳಾದ ಶ್ರೀಯುತ ಸೋಮಶೇಖರ ಶೆಟ್ಟಿ, ಶ್ರೀಯುತ ಯುವರಾಜ ಪೂವಣಿ, ಎಸ್. ಡಿ. ಎಂ ಕನ್ನಡ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಸುರೇಶ್ ಹಾಗೂ ಸಿ. ಬಿ. ಎಸ್. ಸಿ ಪ್ರಾಂಶುಪಾಲರಾದ ಶ್ರೀ ಮನಮೋಹನ್ ನಾಯಕ್ ಉಪಸ್ಥಿತರಿದ್ದರು. ಕಾಲೇಜಿನ ಗಣಿತಶಾಸ್ತ್ರ ಉಪನ್ಯಾಸಕಿಯಾಗಿರುವ ಶ್ರೀಮತಿ ಧನಲಕ್ಷ್ಮಿ ಅವರು ಸ್ವಾಗತಿಸಿದರು. ಭೌತಶಾಸ್ತ್ರ ವಿಭಾಗದ ಉಪನ್ಯಾಸಕಿ ಶ್ರೀಮತಿ ಭಾರತಿ ವಂದಿಸಿದರು. ಕನ್ನಡ ವಿಭಾಗದ ಉಪನ್ಯಾಸಕಿ ಕವಿತಾ ಉಮೇಶ್ ನಿರೂಪಿಸಿದರು.

Leave a comment

ಗಾಂಧಿ ಜಯಂತಿ ಆಚರಣೆ

ಮಹಾತ್ಮ ಗಾಂಧೀಜಿಯವರ 154ನೇ ಜನ್ಮದಿನದ ಆಚರಣೆಯ ಪ್ರಯುಕ್ತ, ‘ಸ್ವಚ್ಛ ದಿವಸ’ ಪರಿಕಲ್ಪನೆ ಅಡಿಯಲ್ಲಿ ಕಾಲೇಜಿನ ಸುತ್ತಮುತ್ತನ ಆವರಣವನ್ನು ಸ್ವಚ್ಛಗೊಳಿಸಲಾಯಿತು. ಕಾಲೇಜಿನ ವಿದ್ಯಾರ್ಥಿಗಳೆಲ್ಲಾ ಉತ್ಸುಕತೆಯಿಂದ ಸ್ವಚ್ಛತೆಯ ದಿವಸದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಕೈಗೊಂಡು ಪೂಜ್ಯ ರನ್ನು ಸ್ಮರಿಸಲಾಯಿತು. ಕಾಲೇಜಿನ ಪ್ರಾಂಶುಪಾಲರಾದ ಶ್ರೀಯುತ ಸುನಿಲ್ ಪಂಡಿತ್ ರು ಮಹಾತ್ಮ ಗಾಂಧೀಜಿಯವರ ವಿಚಾರಧಾರೆಗಳ ಪ್ರಸ್ತುತ ದಿನಮಾನದಲ್ಲಿ ಅಗತ್ಯತೆ ಹಾಗೂ ಲಾಲ್ ಬಹುದ್ದೂರ್ ಶಾಸ್ತ್ರಿ ಅವರ ಪ್ರಾಮಾಣಿಕತೆ ಹಾಗೂ ಸರಳ ಬದುಕಿನ ವಿಶೇಷತೆಗಳನ್ನು ಅನೇಕ ಉದಾಹರಣೆಗಳ ಮೂಲಕ ವಿದ್ಯಾರ್ಥಿಗಳಿಗೆ ತಿಳಿಸಿದರು. ಕಾಲೇಜಿನ ದೈಹಿಕ ಶಿಕ್ಷಕರಾದ ಲಕ್ಷ್ಮಣ್ ಜಿ.ಡಿ ಅವರು ವಸತಿ ನಿಲಯದ ವಾರ್ಡನ್ ಗಳು ಉಪಸ್ಥಿತರಿದ್ದರು.

Leave a comment

ಪದವಿ ಪೂರ್ವ ಕಾಲೇಜುಗಳ ತಾಲೂಕು ಮಟ್ಟದ ವಾಲಿಬಾಲ್ ಕ್ರೀಡಾಕೂಟ

ಪದವಿ ಪೂರ್ವ ಕಾಲೇಜುಗಳ ತಾಲೂಕು ಮಟ್ಟದ ವಾಲಿಬಾಲ್ ಕ್ರೀಡಾಕೂಟ ರತ್ನವರ್ಮ ಹೆಗ್ಗಡೆ ಕ್ರೀಡಾಂಗಣ ಉಜಿರೆ ಇಲ್ಲಿ ನಡೆಯಿತು. ಕ್ರೀಡಾಕೂಟಗಳು ಸ್ಪರ್ಧಾತ್ಮಕ ಮನೋಭಾವ, ಸಾಮಾಜಿಕವಾಗಿ ಬೆಳೆಯುವ ಬೆರೆಯುವ ಗುಣವನ್ನು ವೃದ್ಧಿಸುವುದರೊಂದಿಗೆ, ವಿದ್ಯಾರ್ಥಿಗಳು ಎಳವೆಯಲ್ಲಿ ಸ್ವಸ್ಥ – ಸದೃಢವಾಗಿ ಬೆಳೆಯುವಲ್ಲಿ ಸಹಕಾರಿಯಾಗಿದೆ. ಕ್ರೀಡೆಗಳು ವಿದ್ಯಾರ್ಥಿಗಳ ಕಲಿಕೆಯ ಜೊತೆಗೆ ಬದುಕನ್ನು ಕಟ್ಟಿಕೊಡುವುದು . ವಿದ್ಯಾರ್ಥಿ ದೆಸೆಯಲ್ಲಿ ಕ್ರೀಡೆಯಲ್ಲಿ ಪಾಲ್ಗೊಂಡು ಸರ್ವಾಂಗೀಣ ಸದೃಢ ,ಸ್ವಸ್ತ ಸಮಾಜದ ನಿರ್ಮಾಣಕ್ಕೆ ನಾವು ಬದ್ಧರಾಗಬೇಕು ಎಂದು ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ್ದ ಬೆಳ್ತಂಗಡಿಯ ಪೊಲೀಸ್ ಇಲಾಖೆಯ ಸರ್ಕಲ್ ಇನ್ಸ್ಪೆಕ್ಟರ್ ಆಗಿರುವ ಶ್ರೀಯುತ ನಾಗೇಶ್ ಕದ್ರಿ ಅವರು ಮಾತನಾಡಿದರು. ಕಲಿಕೆಯೊಂದಿಗೆ ಕ್ರೀಡೆ ಸ್ಪರ್ಧಾತ್ಮಕ ಯುಗದಲ್ಲಿ ನಮ್ಮನ್ನ ಗುರುತಿಸುವಂತೆ ಮಾಡುವುದು . ಏಕಾಗ್ರತೆ ದೈಹಿಕ ,ಮಾನಸಿಕ ಸದೃಢತೆಗೆ ಆಟೋಟಗಳು ಸಹಕಾರಿ.ಎಲ್ಲಾ ಶಿಕ್ಷಣ ಸಂಸ್ಥೆಗಳು ಕ್ರೀಡೆಗಳಿಗೆ ಮಹತ್ವವನ್ನು ನೀಡಬೇಕು . ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಅನಾರೋಗ್ಯ ಪರಿಸ್ಥಿತಿಗಳನ್ನ ಎದುರಿಸಲು ಹಾಗೂ ಸ್ವಸ್ಥ ಸದೃಢ ಸಮಾಜದ ನಿರ್ಮಾಣಕ್ಕೆ ಕ್ರೀಡೆಗಳು ಉತ್ತಮ ಮಾರ್ಗೋಪಾಯವಾಗಿದೆ ಎಂದು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಎಸ್. ಡಿ .ಎಮ್ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಗಳಾಗಿರುವ ಶ್ರೀಯುತ ಸತೀಶ್ಚಂದ್ರ ಎಸ್ ಇವರು ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಎಸ್.ಡಿ. ಎಮ್ ವಸತಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀಯುತ ಸುನಿಲ್ ಪಂಡಿತ್ ಮಾತನಾಡಿ ಭಾಗವಹಿಸುವಿಕೆ ಬಹಳ ಮುಖ್ಯ, ಬಹುಮಾನವಲ್ಲ ,ಸ್ಪರ್ಧಾತ್ಮಕ ಮನೋಭಾವದೊಂದಿಗೆ ಈ ಕ್ರೀಡೆಯನ್ನು ಯಶಸ್ವಿಗೊಳಿಸಿ ಎಂದು ವಿದ್ಯಾರ್ಥಿಗಳನ್ನು ಹುರಿದುಂಬಿಸಿ ಶುಭಾಶಯ ಕೋರಿದರು.
ಕ್ರೀಡಾಕೂಟದಲ್ಲಿ ವಿದ್ಯಾರ್ಥಿಗಳ 16 ತಂಡ ಹಾಗೂ ವಿದ್ಯಾರ್ಥಿನಿಯರ 7 ಒಟ್ಟು 23 ತಂಡಗಳು ಭಾಗವಹಿಸಿದ್ದವು.

ವಿದ್ಯಾರ್ಥಿಗಳ ತಂಡದಲ್ಲಿ ಎಸ್‌.ಡಿ.ಎಂ ಪದವಿ ಪೂರ್ವ ಕಾಲೇಜು ಉಜಿರೆ ತಂಡ ಪ್ರಥಮ ಹಾಗೂ ವಾಣಿ ಪದವಿ ಪೂರ್ವ ಕಾಲೇಜು ರನ್ನರ್ ಪ್ರಶಸ್ತಿಯನ್ನು ಪಡೆದುಕೊಂಡಿತು.
ವಿದ್ಯಾರ್ಥಿನಿಯರ ತಂಡದಲ್ಲಿ ಮುಂಡಾಜೆ ಪದವಿ ಪೂರ್ವ ಕಾಲೇಜಿನ ತಂಡ ಪ್ರಥಮ ಎಸ್‌.ಡಿ.ಎಂ ಪದವಿ ಪೂರ್ವ ಕಾಲೇಜು ಉಜಿರೆ ತಂಡ ರನ್ನರ್ ಸ್ಥಾನವನ್ನು ಪಡೆದುಕೊಂಡಿತು.
ಸಂಪೂರ್ಣ ಜವಾಬ್ದಾರಿಯನ್ನು ಎಸ್ .ಡಿ .ಎಂ ವಸತಿ ಪದವಿ ಪೂರ್ವ ಕಾಲೇಜು ವಹಿಸಿಕೊಂಡು ಸಮರ್ಥವಾಗಿ ನಿರ್ವಹಿಸಿತು. ವೇದಿಕೆಯಲ್ಲಿ ಉಪ ಪ್ರಾಂಶುಪಾಲರಾದ ಮನೀಶ್ ಕುಮಾರ್, ವಿದ್ಯಾರ್ಥಿ ಕ್ಷೇಮ ಪಾಲನ ಅಧಿಕಾರಿಯಾಗಿ ಸೋಮಶೇಖರ್ ಶೆಟ್ಟಿ , ದೈಹಿಕ ಶಿಕ್ಷಕರಾದ ಲಕ್ಷ್ಮಣ್ ಜಿ.ಡಿ ಅವರು ಹಾಗೂ ಸಂಸ್ಥೆಯ ಇತರೆ ದೈಹಿಕ ಶಿಕ್ಷಕರು ಉಪಸ್ಥಿತರಿದ್ದರು. ಭೌತಶಾಸ್ತ್ರದ ಉಪನ್ಯಾಸಕರಾದ ವಿಕ್ರಂ, ಗಣಿತಶಾಸ್ತ್ರ ಉಪನ್ಯಾಸಕರಾದ ಪ್ರಿಯ ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು.

Leave a comment

ಎಸ್.ಡಿ.ಎಂ ವಸತಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಸುನಿಲ್ ಪಂಡಿತ್ ಹಾಗೂ ಎಲ್ಲಾ ವಿಷಯವಾರು ಶಿಕ್ಷಕರನ್ನು ಸನ್ಮಾನಿಸಲಾಯಿತು

ದಕ್ಷಿಣ ಕನ್ನಡ ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಚಾರ್ಯರ ಸಂಘ ಹಾಗೂ ಉಪನ್ಯಾಸಕರ ಸಂಘ(ರಿ) ಮಂಗಳೂರು ವತಿಯಿಂದ ಹಮ್ಮಿಕೊಂಡಿದ್ದ ‘ಶಿಕ್ಷಕರ ದಿನಾಚರಣೆ’ ಕಾರ್ಯಕ್ರಮದಲ್ಲಿ 2022-2 3ರ ಶೈಕ್ಷಣಿಕ ಸಾಲಿನಲ್ಲಿ 100% ಫಲಿತಾಂಶ ಪಡೆದ ಎಸ್.ಡಿ.ಎಂ ವಸತಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಸುನಿಲ್ ಪಂಡಿತ್ ಹಾಗೂ ಎಲ್ಲಾ ವಿಷಯವಾರು ಶಿಕ್ಷಕರನ್ನು ಸನ್ಮಾನಿಸಲಾಯಿತು. ಸಂದರ್ಭದಲ್ಲಿ

ವಿಧಾನ ಪರಿಷತ್ ಸದಸ್ಯರು ಆಗಿರುವ ಶ್ರೀ ಎಸ್.ಎಲ್ ಭೋಜೇಗೌಡ, ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕರು ಆಗಿರುವ ಶ್ರೀ ಜಯಣ್ಣ ಸಿ.ಡಿ ದಕ್ಷಿಣ ಕನ್ನಡ ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಚಾರ್ಯರ ಸಂಘದ ಅಧ್ಯಕ್ಷರು ಆಗಿರುವ ಕೆ.ಎನ್ ಗಂಗಾಧರ ಆಳ್ವಾ ಉಪಸ್ಥಿತರಿದ್ದು ಎಲ್ಲರನ್ನೂ ಅಭಿನಂದಿಸಿದರು.

Leave a comment

ಯೋಗಾಸನ ಸ್ಪರ್ಧೆ : ರಾಜ್ಯ ಮಟ್ಟಕ್ಕೆ ಆಯ್ಕೆ

ಶ್ರೀ ರಾಮ ಪದವಿ ಪೂರ್ವ ಕಾಲೇಜು ಕಲ್ಲಡ್ಕ ಇಲ್ಲಿ ಪದವಿ ಪೂರ್ವ ಕಾಲೇಜುಗಳ ‘ಜಿಲ್ಲಾ ಮಟ್ಟ’ದ ಯೋಗಾಸನ ಸ್ಪರ್ಧೆ ನಡೆಯಿತು. ವಿದ್ಯಾರ್ಥಿಗಳಾದ ನಂದೀಶ್ ಎಸ್. ಎಸ್., ಭರತ್ ಕುಮಾರ್, ಅರ್ಜುನ್ ಎಸ್. ಎನ್., ಕೌಸ್ತುಭ, ಚೇತನ್ ಕಾಲೇಜನ್ನು ಪ್ರತಿನಿಧಿಸಿ ರನ್ನರ್ ಟ್ರೋಫಿ ತಮ್ಮದಾಗಿಸಿಕೊಂಡರೆ, ವಿದ್ಯಾರ್ಥಿ ಅರ್ಜುನ್ ಎಸ್. ಎನ್. ರಾಜ್ಯ ಮಟ್ಟಕ್ಕೆ ಆಯ್ಕೆಗೊಂಡನು. ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿ ದೈಹಿಕ ಶಿಕ್ಷಕರಾದ ಲಕ್ಷ್ಮಣ್ ಜಿ. ಡಿ. ಹಾಗೂ ಸಂಸ್ಥೆಯ ಈಜು ತರಬೇತುದಾರಾದ ಶ್ರೀಯುತ ಸೀನಪ್ಪರವರು ಶ್ರಮಿಸಿದ್ದರು.ಸಹಾಯಕ ವಾರ್ಡನ್ ಆಗಿರುವ ಮನೋಜ್ ವಿದ್ಯಾರ್ಥಿಗಳ ಜೊತೆಗಿದ್ದು ಸಹಕರಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಸುನಿಲ್ ಪಂಡಿತ್ ಹಾಗೂ ಸಿಬ್ಬಂದಿವರ್ಗ ವಿದ್ಯಾರ್ಥಿಗಳ ಸಾಧನೆಯನ್ನು ಪ್ರಶಂಸಿದರು.

Leave a comment

ಸಂಭ್ರಮದ ಶಿಕ್ಷಕರ ದಿನಾಚರಣೆ

ಜ್ಞಾನದ ಮಾರ್ಗದಿಂದ ಸುಜ್ಞಾನದೆಡೆಗೆ ಕೊಂಡೊಯ್ಯುವ ಶಿಕ್ಷಕ ವೃತ್ತಿ ಗೌರವಯುತವಾದದ್ದು. ವಿದ್ಯಾರ್ಥಿ ದೆಸೆಯಲ್ಲೇ ತಾನು ಗಳಿಸುವ ಅಂಕದೊಂದಿಗೆ ಉತ್ತಮ ನಡತೆ ಹಾಗೂ ಮೌಲ್ಯಯುತ ಬದುಕು ಕಟ್ಟಿಕೊಳ್ಳಲು ತಯಾರಾಗುವುದು ಶಿಕ್ಷಕರಿಗೆ ನೀಡುವ ದೊಡ್ಡ ಕೊಡುಗೆ. ಗುರು ಹಾಕಿಕೊಟ್ಟ ಮಾರ್ಗದಲ್ಲಿ ಭವಿಷ್ಯವನ್ನು ಸುಂದರವಾಗಿ ಕಟ್ಟುವ ಕಾರ್ಯದಲ್ಲಿ ಸನ್ನದ್ದ ರಾಗಿ ಕಲಿಸಿದ ಗುರುವಿಗೂ, ಸಂಸ್ಥೆಗೂ ಕೀರ್ತಿ ತರುವಂತವರಾಗಿ ಎಂದು ಕಾಲೇಜಿನ ಪ್ರಾಂಶುಪಾಲರಾದ ಶ್ರೀಯುತ ಸುನಿಲ್ ಪಂಡಿತ್ ಅವರು ಹೇಳಿದರು.

ಕಾಲೇಜಿನ ವಿದ್ಯಾರ್ಥಿಗಳು ಒಟ್ಟು ಸೇರಿ ಆಯೋಜಿಸಿದ ‘ಶಿಕ್ಷಕರ ದಿನಾಚರಣೆ’ ಕಾರ್ಯಕ್ರಮದಲ್ಲಿ ಎಲ್ಲಾ ಶಿಕ್ಷಕರಿಗೆ ಉಡುಗೊರೆಗಳನ್ನು ನೀಡಿ ಗೌರವಿಸಿದರು. ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸಂಭ್ರಮಿಸಿದರು.ಕಾಲೇಜಿನ ದ್ವಿತೀಯ ವರ್ಷದ ವಿದ್ಯಾರ್ಥಿ ಪೂರ್ವಿಕ್ ನಿರೂಪಿಸಿದರೆ,ವರುಣ್ ವಂದಿಸಿದರು.

Leave a comment

ಬೀಳ್ಕೊಡುಗೆ ಕಾರ್ಯಕ್ರಮ

ಸ್ವಚ್ಛತೆ ಆರೋಗ್ಯಕ್ಕೆ ಮೂಲ, ಕಾಲೇಜು ವಾತಾವರಣವೂ ಕಲಿಕೆಗೆ ಪೂರಕವಾಗಿರಬೇಕಾದರೆ ಶುದ್ಧವಾದ ಪರಿಸರ ಸೃಷ್ಟಿಯಾಗಬೇಕು. ಈ ಕೆಲಸ ನಿರ್ವಹಿಸುವ ನಿಟ್ಟಿನಲ್ಲಿ ಸ್ವಚ್ಛತಾ ಸಿಬ್ಬಂದಿಗಳ ಪಾತ್ರ ಬಹಳ ಮುಖ್ಯ ಅವರ ಸೇವೆಯನ್ನು ಗುರುತಿಸುವ ಇಂತಹ ಕಾರ್ಯಗಳು ಶ್ಲಾಘನೀಯಯೆಂದರು. ಕಾಲೇಜಿನಲ್ಲಿ ಸುಮಾರು ಹತ್ತು ವರ್ಷಗಳ ಕಾಲ ಸ್ವಚ್ಛತಾ ಸಿಬ್ಬಂದಿಯಾಗಿ ಸೇವೆ ಸಲ್ಲಿಸಿ ಸೇವಾ ನಿವೃತ್ತಿ ಹೊಂದಿದ್ದ ಶ್ರೀಯುತ ಅಮ್ಮು ಅವರಿಗೆ ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಪದವಿ ಕಾಲೇಜಿನ ವಾಣಿಜ್ಯ ವಿಭಾಗದ ಪ್ರಾಧ್ಯಾಪಕರಾದ ಶ್ರೀಯುತ ಹರೀಶ್ ಶೆಟ್ಟಿ ಮಾತನಾಡಿದರು.

ಈ ಸಂದರ್ಭದಲ್ಲಿ ಅಮ್ಮುರವರನ್ನು ಉಡುಗೊರೆಯೊಂದಿಗೆ ಸನ್ಮಾನಿಸಲಾಯಿತು.ಅವರ ಆಸೆಯಂತೆ ಇನ್ನೂ ಒಂದು ವರ್ಷಗಳ ಕಾಲ ಸೇವಾವಧಿ ವಿಸ್ತರಿಸಿದ ಕುರಿತಾಗಿರುವ ಪತ್ರ ನೀಡಲಾಯಿತು. ಕಾಲೇಜಿನ ಪ್ರಾಂಶುಪಾಲರಾದ ಸುನಿಲ್ ಪಂಡಿತ್ ಅವರು ಅಮ್ಮು ಅವರ ಮುಂದಿನ ಜೀವನ ಸುಖಕರವಾಗಿರಲಿಯೆಂದು ಹಾರೈಸಿದರು. ಕಾಲೇಜಿನ ದೈಹಿಕ ಶಿಕ್ಷಕರಾದ ಲಕ್ಷ್ಮಣ್ ಜಿ. ಡಿ. ಯವರು ಅಮ್ಮು ಅವರ ಕುರಿತಾಗಿ ಅನುಭವದ ನುಡಿಗಳನ್ನಾಡಿದರು.

ಈ ಸಂದರ್ಭದಲ್ಲಿ ಕಾಲೇಜಿನ ಉಪ ಪ್ರಾಂಶುಪಾಲರಾದ ಮನೀಶ್ ಕುಮಾರ್ ಕಾಲೇಜಿನ ಉಪನ್ಯಾಸಕ ವೃಂದ, ಸ್ವಚ್ಛತಾ ಸಿಬ್ಬಂದಿಗಳು ಹಾಜರಿದ್ದರು. ಕನ್ನಡ ಉಪನ್ಯಾಸಕಿ ಕವಿತಾ ಉಮೇಶ್ ವಂದಿಸಿ ನಿರೂಪಿಸಿದರು.

Leave a comment

ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ , ಮೆಷಿನ್ ಲರ್ನಿಂಗ್ ಮಾಹಿತಿ ಕಾರ್ಯಾಗಾರ

ಮುಂದಿನ ದಿನಗಳಲ್ಲಿ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಬಹು ಮುಖ್ಯ ಮಹತ್ವವನ್ನು ಪಡೆಯಲಿದೆ. ಈ ತಂತ್ರಜ್ಞಾನ ದಿಂದ ನಮ್ಮ ಕೆಲಸಗಳು ಸರಳಗೊಳ್ಳಲಿದೆ ಎಂದು ಯಸ್ ಡಿ ಯಂ ಐ ಟಿ ಕಾಲೇಜಿನ ಅಸಿಸ್ಟಂಟ್ ಪ್ರೊಫೆಸರ್ ಧವಳ್ ಜೈನ್ ಮಾಹಿತಿಯನ್ನು ನೀಡಿದರು.

ಯಸ್ ಡಿ ಯಂ ರೆಸಿಡೆನ್ಸಿಯಲ್ ಪಿ ಯು ಕಾಲೇಜಿನ ಕಂಪ್ಯೂಟರ್ ಸೈನ್ಸ್ ಹಾಗೂ ಟೆಕ್ನೋ ಕ್ಲಬ್ ನ ವತಿಯಿಂದ ನಡೆದ ಮಾಹಿತಿ ಕಾರ್ಯಾಗಾರದಲ್ಲಿ ಮಾತನಾಡುತ್ತ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ , ಮೆಷಿನ್ ಲರ್ನಿಂಗ್ ಮುಂತಾದ ವಿಷಯಗಳ ಬಗ್ಗೆ ಪ್ರಥಮ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಮಾಹಿತಿಯನ್ನು ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಸುನಿಲ್ ಪಂಡಿತ್ ರವರು , ವಿದ್ಯಾರ್ಥಿಗಳು ಕ್ರಿಯಾಶೀಲರಾಗಿ , ಈ ಕಾರ್ಯಕ್ರಮದ ಭಾಗವಾಗಿ ಇದರ ಸದುಪಯೋಗವನ್ನು ಪಡೆದು ಕೊಳ್ಳಬೇಕೆಂದು ತಿಳಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ದ್ವಿತೀಯ ಪಿಯುಸಿ ವಿದ್ಯಾರ್ಥಿ ಶಿವಂ ನಂದಕಿಶೋರ್ ನೆರವೇರಿಸಿದರು. ಕಾಲೇಜಿನ ಕಂಪ್ಯೂಟರ್ ಸೈನ್ಸ್ ಉಪನ್ಯಾಸಕ ಶ್ರೀ ಪವಿತ್ರ ಕುಮಾರ್ ಸ್ವಾಗತಿಸಿದರು. ಕಾಲೇಜಿನ ಉಪ ಪ್ರಾಂಶುಪಾಲ ಶ್ರೀ ಮನೀಷ್ ಕುಮಾರ್ ಹಾಗೂ ಸಯನ್ಸ್ ಕ್ಲಬ್ ಸಂಯೋಜಕ ಶ್ರೀ ರಮೇಶ್ ಬಾಬು ಉಪಸ್ಥಿತರಿದ್ದರು.

Leave a comment