ಇಲ್ಲಿನ ಎಸ್.ಡಿ.ಎಂ. ಸನಿವಾಸ ಪದವಿಪೂರ್ವ ಕಾಲೇಜು (SDM Residential PU College, Ujire) ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ. 100 ಫಲಿತಾಂಶ ದಾಖಲಿಸಿದೆ. ಒಟ್ಟು 152 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 109 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಹಾಗೂ 43 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಎಂ. ಧೀಮಂತ ಹೆಬ್ಬಾರ್ 592 (ರಾಜ್ಯಕ್ಕೆ ಏಳನೇ ದರ್ಜೆ), ಹರ್ಷಿತ್ ಎ.ವಿ., ವಿಶ್ವಾಸ್ ನಾಯಕ್ ಡಿ.ಪಿ. ತಲಾ 585, ಸಂಜಯ್ ಪಾಟೀಲ್ ಕೆ.ಎಲ್. 582, ವಿನಯ್ ಸಿ.ಎಂ. 581, ವರುಣ್ ಕುಮಾರ್ ಎಚ್.ಎಲ್. 580, ಚಿರಾಗ್ ಎಸ್. 578, ಪೂರ್ವಿಕ್ ಟಿ.ಎಂ. 577, ಶಾರ್ವಿನ್ 576, ತರುಣ್ ಎಚ್.ಬಿ. 574, ಹೊಯ್ಸಳ್ ರಾಜಕುಮಾರ್ ಪಿ. 573, ಧೀರಜ್ ಸಿ. 573, ಜೀವನ್ ಕೆ.ವಿ. 572, ಕೆ.ಎಂ. ಮನೋಜ್ ಕುಮಾರ್ 572, ಸೃಜಿತ್ ಎಸ್.ಎ. 571, ವಿನಯ್ ಕೆ.ಎಂ. 571, ಬಿಂದು ಮಾಧವ 570 ಅಂಕ ಗಳಿಸಿದ್ದಾರೆ.

