Skip to content Skip to footer

ಜೀವನವೆಂಬ ಸಾಗರದಲ್ಲಿ ಈಜಲು ಬೇಕಾಗಿರುವುದು ಆತ್ಮವಿಶ್ವಾಸವೆಂಬ ಹರಿಗೋಲು. ಸಂಸ್ಕಾರ, ಆತ್ಮವಿಶ್ವಾಸ, ಮೌಲ್ಯ ಇವು ಮೂರು ಜೀವನವನ್ನು ಸುಂದರ ಗೊಳಿಸುವುದು. ಕೇವಲ ಅಂಕ ಪಡೆಯುವ ಯಂತ್ರಗಳಾಗದೆ ಸಮಾಜವನ್ನು ಮುನ್ನಡೆಸುವ ಶಕ್ತಿಗಳಾಗಿ. ಬದುಕಿನ ಯಾವುದೇ ಸಂದರ್ಭದಲ್ಲೂ ಎದೆಗುಂದದೆ ಮುನ್ನಡೆಯುವ ಕಲೆಯನ್ನು ತಮ್ಮದಾಗಿಸಿಕೊಳ್ಳಿ. ಜೀವನದಲ್ಲಿ ಮುಂಬರುವ ಎಲ್ಲಾ ಸವಾಲುಗಳನ್ನು ಧೈರ್ಯದಿಂದ ಎದುರಿಸುವ ನಿಪುಣತೆ ಚತುರತೆಯನ್ನು ಬೆಳೆಸಿಕೊಳ್ಳಿ. ಹಿರಿಯರು ಭಗವಂತನು ಮೆಚ್ಚುವಂತಹ ಕಾರ್ಯಗಳನ್ನು ಮಾಡಿ, ಸಮಾಜ ಕಟ್ಟುವ ರೂವಾರಿಗಳಾದ ನೀವು ವಿಶ್ಲೇಷಣಾತ್ಮಕ, ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಿ, ಮುಂದಿನ ಭವಿಷ್ಯ ಉಜ್ವಲವಾಗಲಿಯೆಂದರು.

ಪೂಜ್ಯ ಖಾವಂದರನ್ನು ಹಾಗೂ ಮಾತೃಶ್ರಿ ಹೇಮಾವತಿ ಹೆಗ್ಗಡೆಯವರನ್ನು ಕಾಲೇಜಿನ ದ್ವಿತೀಯ ವರ್ಷದ ವಿದ್ಯಾರ್ಥಿಗಳು ಭೇಟಿ ಮಾಡಿ ಆಶೀರ್ವಾದ ಪಡೆದರು, ಎರಡು ವರ್ಷಗಳ ಕಾಲ ಎಸ್.ಡಿ.ಎಮ್. ವಸತಿ ಕಾಲೇಜಿನಲ್ಲಿ ಅತ್ಯುತ್ತಮವಾದ ವ್ಯವಸ್ಥೆ ನಿರ್ಮಾಣ ಮಾಡಿಕೊಟ್ಟ ಪೂಜ್ಯ ಹೆಗ್ಗಡೆ ದಂಪತಿಗಳಿಗೆ ವಿದ್ಯಾರ್ಥಿಗಳು ಕೃತಜ್ಞತೆ ಸಲ್ಲಿಸಿದರು. ಪೂಜ್ಯರ ಭೇಟಿಯ ಜವಾಬ್ದಾರಿ ಹೊತ್ತಿದ್ದ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಸುನಿಲ್ ಪಂಡಿತ್ ಹಾಗೂ ಉಪ ಪ್ರಾಂಶುಪಾಲರಾದ ಮನೀಶ್ ಕುಮಾರ್ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.