Skip to content Skip to footer

Value Based Education Programme Inauguration

Value based education programme was inaugurated by Vidhwan Ashok Bhat. Money does not value everything , characters are very important in the life of student said by guest. Mr. Sunil Pandit presided the programme and Mr. Krishna Prasad hosted and thanked.

Leave a comment

International Yoga day

Yoga day was observed in college on 21 June 2024 in the prayer hall. Students showed their various yoga postures and yoga competition was held for students. Students were awarded prizes from the principal. All lecturers were present on the occassion.

Leave a comment

Inauguration of Various Clubs 2024-25

Various clubs of the college inaugurated by Dr. Shalip A.P Registrar H.O.D Department of Political Science SDM College Ujire. She said Participate actively in all the clubs of the college and use the precious time that the students got in their life. Mr. Sunil Pandit Principal presided the programme. Mr. Parshwanth hegde hosted and thanked.

Leave a comment

ವ್ಯಕ್ತಿತ್ವ ವಿಕಸನ ಕಾರ್ಯಗಾರ

ಕಲಿಕೆ ಮೂಲಕ ಸಂಸ್ಕಾರ ವೃದ್ಧಿಗೊಂಡರೆ ಭವಿಷ್ಯ ಉತ್ತಮಗೊಳ್ಳುವುದು. ಸಮಾಜದ ಏಳಿಗೆಗೆ ಉತ್ತಮ ಯುವ ಪೀಳಿಗೆಯ ಅನಿವಾರ್ಯತೆ ಇದ್ದು, ಮೌಲ್ಯಯುತ ವಿದ್ಯೆ ,ಉತ್ತಮ ಗುಣನಡತೆಯೂ, ವಿನಯಶೀಲತೆಯೂ ಅತೀ ಮುಖ್ಯ.ಗುರುಕುಲ ಮಾದರಿ ಶಿಕ್ಷಣ ಎಲ್ಲಾದರೂ ಸ್ವಲ್ಪ ಮಟ್ಟಿಗೆ ಉಳಿದಿದೆ ಎಂದಾದರೆ ಅದು ಈ ಸಂಸ್ಥೆ ಮೂಲಕವೆಂದು, ಕಾಲೇಜಿನಲ್ಲಿ ಹೊಸದಾಗಿ ಸೇರ್ಪಡೆಗೊಂಡ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಆಟ,ಉದಾಹರಣೆಗಳ ಮೂಲಕ ಎರಡು ದಿನಗಳ ಕಾರ್ಯಗಾರವನ್ನು ಎಸ್.ಡಿ.ಎಂ.ಪದವಿಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕರಾದ ಶ್ರೀಯುತ ಮಹಾವೀರ ಜೈನ್ ನಡೆಸಿಕೊಟ್ಟರು. ಕಾಲೇಜಿನ ಪ್ರಾಂಶುಪಾಲರಾದ ಸುನಿಲ್ ಪಂಡಿತ್ ಹಾಗೂ ರಸಾಯನಶಾಸ್ತ್ರದ ಉಪನ್ಯಾಸಕಿ ಚೈತ್ರ ಕೆ.ಎಸ್.ಉಪಸ್ಥಿತರಿದ್ದರು. ಗಣಕಶಾಸ್ತ್ರ ಉಪನ್ಯಾಸಕರಾದ ಕೃಷ್ಣಪ್ರಸಾದ್ ವಂದಿಸಿ,ನಿರೂಪಿಸಿದರು.

Leave a comment

ಡಾ| ಟಿ.ಎನ್. ತುಳುಪುಳೆ ನೆನಪು, ದತ್ತಿ ಉಪನ್ಯಾಸ ಹಾಗೂ ಸನ್ಮಾನ

ಸಾಹಿತ್ಯದಲ್ಲಿ ಆಸಕ್ತಿ ಬೆಳೆಸುವುದರಿಂದ ನಮ್ಮ ಪ್ರತಿಭೆ ಅನಾವರಣ, ಭಾಷೆಯ ಸಾವಿರ ಪ್ರಭುತ್ವ ಬೆಳೆದು ಬದುಕಿಗೆ ಸ್ಫೂರ್ತಿ ದಏಒರೆಯುವುದು. ನಮ್ಮ ಬದುಕು ಕಟ್ಟಿಕೊಡಲು ಸಾಹಿತ್ಯ ಪ್ರೇರಣೆಯಾಗಿ ಮಾರ್ಗದರ್ಶಿಯಾಗುವುದು. ಮಾತುಗಳಿಗಿಂತ ಮೀರಿದ ಶಕ್ತಿ ಸಾಹಿತ್ಯಕ್ಕಿದೆ ಎಂದು ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಸಂಪತ್ ಬಿ. ಸುವರ್ಣ ಹೇಳಿದರು. ಉಜಿರೆಯ ಶ್ರೀ ಧ.ಮಂ. ಪಿ.ಯು. * ವಸತಿ ಕಾಲೇಜಿನಲ್ಲಿ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಬೆಳ್ತಂಗಡಿ ತಾಲೂಕು ಘಟಕ ಮತ್ತು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ.ಪೂ. ವಸತಿ ಕಾಲೇಜಿನ ಆಶ್ರಯದಲ್ಲಿ ಡಾ। ಟಿ.ಎನ್. ತುಳುಪುಳೆ ನೆನಪು, ದತ್ತಿ ಉಪನ್ಯಾಸ ಮತ್ತು ಸಮ್ಮಾನ ಕಾರ್ಯಕ್ರಮದಲ್ಲಿ ಸಾಹಿತ್ಯ-ಪ್ರೇರಣೆ ಎಂಬ ವಿಚಾರವಾಗಿ ಉಪನ್ಯಾಸ ನೀಡಿದರು. ಡಾ| ಎನ್.ಎಂ.ತುಳುಪುಳೆ ಮಾತನಾಡಿ, ಜೋತಿಷ, ಯಕ್ಷಗಾನ ಅರ್ಥಧಾರಿ, ಹರಿಕಥೆಗಳಲ್ಲಿ ಆಸಕ್ತಿ ಹೊಂದಿದವರು. ಅವರ ಗ್ರಂಥ ಡಾ। ಟಿ. ಎನ್.ತುಳುಪುಳೆ ಬಹುಮುಖ ಪ್ರತಿಭಾವಂತರಾಗಿ ಸಾಹಿತ್ಯ ಬದುಕಿಗೆ ಪ್ರೇರಣೆಯಾಗಲಿ ಎಂದರು. ಡಾ। ಟಿ.ಎನ್.ತುಳುಪುಳೆ ದತ್ತಿ ಉಪನ್ಯಾಸವನ್ನು ಉದ್ಘಾಟಿಸಿದ ಎಸ್‌ಡಿಎಂ ವಸತಿ ಪ.ಪೂ. ಕಾಲೇಜಿನ ಪ್ರಾಂಶುಪಾಲ ಸುನಿಲ್ ಪಂಡಿತ್, ಸಾಹಿತ್ಯ ಸಮಾಜದ ದರ್ಪಣ. ಸಾಹಿತ್ಯ ಬದುಕಿಗೆ ಪ್ರೇರಣೆಯಾಗಿ ಮೌಲ್ಯ ಕಟ್ಟಿಕೊಡುತ್ತದೆ. ಸಾಹಿತ್ಯದ ಅಧ್ಯಯನದಿಂದ ಜೀವನ ಮೌಲ್ಯ, ಭಾವನೆಯ ಉದ್ದೀಪನವಾಗುವುದು. ಡಾ| ಟಿ.ಎನ್.ತುಳುಪುಳೆ ಅವರು ಯಾವುದೇ ಪ್ರಶಸ್ತಿ, ಪ್ರಸಿದ್ದಿಗಾಗಿ ಸಾಹಿತ್ಯ ಸೇವೆ ಮಾಡದೆ ಸಾಹಿತ್ಯಾಸಕ್ತಿಯಿಂದ ಸದ್ದಿಲ್ಲದೇ ಸಾಹಿತ್ಯ ಸೇವೆ ಮಾಡಿದವರು. ಅವರಲ್ಲಿ ಆಗಾಧ ಸಾಹಿತ್ಯ ಭಂಡಾರವಿದ್ದು, ಸಾಹಿತ್ಯಾಸಕ್ತರು ಅದನ್ನು ಆಯ್ದು ಓದಬಹುದು ಎಂದರು. ಭಂಡಾರದಲ್ಲಿ ಕನ್ನಡ, ಹಿಂದಿ, ಇಂಗ್ಲಿಷ್, ಮರಾಠಿಯ ಅಮೂಲ್ಯ ಕೃತಿಗಳ ಸಂಗ್ರಹವಿದ್ದು 6-7 ಗ್ರಂಥಲಾಯಕ್ಕೆ ಕೊಡುಗೆಯಾಗಿ ನೀಡಿದ್ದೇವೆ ಎಂದರು. ಸಾಹಿತಿ ಶ್ರೀಕರ ಭಟ್ ಮರಾಠ ಅವರನ್ನು ಗೌರವಿಸಲಾಯಿತು. ನಿವೃತ್ತ ಪ್ರಾಚಾರ್ಯ ಕೃಷ್ಣಪ್ಪ ಪೂಜಾರಿ ಉಪಸ್ಥಿತರಿದ್ದರು. ಕ.ಸಾ.ಪ.ತಾಲೂಕು ಘಟಕ ಅಧ್ಯಕ್ಷ ಡಿ.ಯದುಪತಿ ಗೌಡ ಸ್ವಾಗತಿಸಿ, ಕ.ಸಾ.ಪ. ಕಾರ್ಯದರ್ಶಿ ರಾಮಕೃಷ್ಣ ಭಟ್ ಬೆಳಾಲು ವಂದಿಸಿದರು. ಉಪನ್ಯಾಸಕ ಮಹೇಶ್ ಎಸ್. ಎಸ್. ನಿರೂಪಿಸಿದರು. ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕ.ಸಾ.ಪ. ಅಧ್ಯಕ್ಷಡಾ| ಎಂ.ಪಿ.ಶ್ರೀನಾಥ್ ಮಾತನಾಡಿ, ವಿದ್ಯಾರ್ಥಿಗಳಿಗೆ ಸ್ಫೂರ್ತಿ ಹಾಗೂ ಪ್ರೇರಣೆಯಾಗಬೇಕೆಂಬ ಉದ್ದೇಶದಿಂದ ದತ್ತಿ ಉಪನ್ಯಾಸಗಳನ್ನು ಕಾಲೇಜುಗಳಲ್ಲಿ ನಡೆಸಲಾಗುತ್ತಿದೆ ಎಂದರು.

Leave a comment

ವ್ಯಕ್ತಿತ್ವ ವಿಕಸನ ಕಾರ್ಯಗಾರ

ಸ್ಪರ್ಧಾತ್ಮಕ ಜಗತ್ತಿನಲ್ಲಿ ನಮ್ಮ ವ್ಯಕ್ತಿತ್ವ ನಿರ್ಮಾಣ ಜೊತೆಗೆ ಸವಾಲುಗಳನ್ನು ಎದುರಿಸುವ ಚಾಕಚಕ್ಯತೆ ಬೆಳೆಸಿಕೊಂಡು ಕ್ರಿಯಾಶೀಲತೆಯಿಂದ ಮುನ್ನಡೆದರೆ ಅವಕಾಶಗಳು ನಮ್ಮನ್ನು ಅರಸಿ ಬರುವುದು, ಹಾಗಾಗಿ ಕಲಿಕೆಯ ಜೊತೆಗೆ ನಮ್ಮ ವ್ಯಕ್ತಿತ್ವ ಬೆಳವಣಿಗೆಗೆ ಪೂರಕ ವಿಷಯಗಳ ವಿಷಯಗಳ ಜ್ಞಾನ ಹಾಗೂ ತರಬೇತಿ ಪಡೆದುಕೊಳ್ಳಬೇಕು. ಪದವಿಪೂರ್ವ ಹಂತದಲ್ಲಿ ನಮ್ಮ ಭವಿಷ್ಯದ ನಿರ್ಧಾರಗಳು ಬಹುತೇಕ ಖಚಿತಗೊಂಡರೆ ಗುರಿಯತ್ತ ಸಾಗಲು ಅದು ಪ್ರೇರೇಪಿಸುವುದು ಎಂದರು. ಕಾಲೇಜಿನಲ್ಲಿ ಹೊಸದಾಗಿ ಸೇರ್ಪಡೆಗೊಂಡ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಆಟ,ಉದಾಹರಣೆಗಳ ಮೂಲಕ ಕಾರ್ಯಗಾರವನ್ನು ಎಸ್.ಡಿ.ಎಂ ಪದವಿ ಕಾಲೇಜಿನ ಮನಶಾಸ್ತ್ರದ ಪ್ರಾಧ್ಯಾಪಕರಾದ ಸುಧೀರ್ ಕೆ.ವಿ ನಡೆಸಿಕೊಟ್ಟರು. ಕಾಲೇಜಿನ ಪ್ರಾಂಶುಪಾಲರಾದ ಸುನಿಲ್ ಪಂಡಿತ್ ಹಾಗೂ ರಸಾಯನಶಾಸ್ತ್ರದ ಉಪನ್ಯಾಸಕಿ ಚೈತ್ರ ಕೆ.ಎಸ್.ಉಪಸ್ಥಿತರಿದ್ದರು. ಗಣಕಶಾಸ್ತ್ರ ಉಪನ್ಯಾಸಕರಾದ ಕೃಷ್ಣಪ್ರಸಾದ್ ವಂದಿಸಿ,ನಿರೂಪಿಸಿದರು.

Leave a comment

ಪ್ರಥಮ ಪದವಿಪೂರ್ವ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಕಾರ್ಯಕ್ರಮ

.ಈ ಸಂಸ್ಥೆಯನ್ನು ಕಲಿಕೆಗೆ ಆಯ್ಕೆ ಮಾಡಿಕೊಂಡು ಬಹಳಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡು ಬಂದಿರುವಿರಿ ನಿಮ್ಮೆಲ್ಲಾ ನಿರೀಕ್ಷೆಗಳು ಇಲ್ಲಿ ಈಡೇರಬಲ್ಲದು, ಜೊತೆಗೆ ಮುಂದಿನ ಭವಿಷ್ಯಕ್ಕೆ ಬೇಕಾದ ಸಹಾಯ,ಮಾರ್ಗದರ್ಶನವೂ ದೊರೆಯುವುದು, ಈ ಸಂಸ್ಥೆಯಲ್ಲಿ ಕಲಿತ ಹಲವಾರು ವಿದ್ಯಾರ್ಥಿಗಳು ಬಹಳಷ್ಟು ಉನ್ನತ ಹುದ್ದೆಯಲ್ಲಿ ಮುಂದುವರಿದಿರುವರು. ಶಿಕ್ಷಣದ ಜೊತೆಗೆ ಸಂಸ್ಕಾರದ ಜೀವನ ಮೌಲ್ಯಗಳನ್ನು ಕಲಿಸುತ್ತಿರುವ ಈ ಸಂಸ್ಥೆಯ ಮುಖಾಂತರ ನಿಮ್ಮೆಲ್ಲಾ ಆಶೋತ್ತರಗಳು ಈಡೇರಲಿ ಎಂದು ನಿನಾದದ ಸೋನಿಯಾವರ್ಮಾ ಅವರು ಹಾರೈಸಿದರು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ನಾವು ಎಲ್ಲರೊಂದಿಗೆ ಮುನ್ನಡೆಯಲು ಶ್ರದ್ಧೆಯಿಂದ ಕೂಡಿದ ಕಲಿಕೆ ಅನಿವಾರ್ಯ, ಮನಸ್ಸನ್ನು ಏಕಾಗ್ರತೆಯಿಂದಿರಿಸಿ, ನಿತ್ಯ ಕಲಿಕೆಯಲ್ಲಿ ತೊಡಗಿಸಿಕೊಂಡರೆ, ಭವಿಷ್ಯದ ಉತ್ತಮಿಕೆ ಸಾಧ್ಯವೆಂದು ಸಂಸ್ಥೆಯ ಐ.ಟಿ ಮತ್ತು ವಸತಿ ನಿಲಯಗಳ ಆಡಳಿತ ನಿರ್ವಹಣಾಧಿಕಾರಿಯಾಗಿರುವ ಶ್ರೀಯುತ ಪೂರನ್ ವರ್ಮಾ ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಶ್ರೀಯುತ ಸುನಿಲ್ ಪಂಡಿತ್ ಕಾಲೇಜಿನ ಕುರಿತಾದ ಹೆಚ್ಚಿನ ವಿವರಗಳನ್ನು ವಿದ್ಯಾರ್ಥಿಗಳ ಮನಮುಟ್ಟಿಸಿದರು. ವಸತಿ ನಿಲಯಗಳ ನಿಯಮಾವಳಿಗಳನ್ನು ಗಣಕಶಾಸ್ತ್ರದ ಉಪನ್ಯಾಸಕರಾದ ಶ್ರೀಯುತ ಪವಿತ್ರಕುಮಾರ್ ತಿಳಿಸಿದರು. ಕಾಲೇಜಿನ ಶೈಕ್ಷಣಿಕ ಚಟುವಟಿಕೆ ಕುರಿತು ಗಣಿತಶಾಸ್ತ್ರದ ಉಪನ್ಯಾಸಕಿ ಶ್ರೀಮತಿ ಧನಲಕ್ಷ್ಮಿ ವಿವರಿಸಿದರು. ಕಾಲೇಜಿನ ಉಪಪ್ರಾಂಶುಪಾಲರಾದ ಮನೀಶ್ ಕುಮಾರ್, ದೈಹಿಕ ಮಾರ್ಗದರ್ಶಕರಾದ ಲಕ್ಷ್ಮಣ್ ಜಿ.ಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಗಣಿತಶಾಸ್ತ್ರದ ಉಪನ್ಯಾಸಕಿ ಪ್ರಿಯ ಎಂ. ಹೆಚ್. ವಂದಿಸಿ ,ನಿರೂಪಿಸಿದರು.

Leave a comment

ವಿಶ್ವ ಪರಿಸರ ದಿನ ಆಚರಣೆ

ಕಾಲೇಜಿನ ‘ಇಕೋ ಕ್ಲಬ್’ವತಿಯಿಂದ ವಿಶ್ವ ಪರಿಸರ ದಿನದ ಅಂಗವಾಗಿ ಗಿಡ ನೆಟ್ಟು ಪರಿಸರ ಜಾಗೃತಿ ಮೂಡಿಸಲಾಯಿತು. ಕಾಲೇಜಿನ ಪ್ರಾಂಶುಪಾಲರಾದ ಶ್ರೀಯುತ ಸುನಿಲ್ ಪಂಡಿತ್ ಪರಿಸರದ ಕಾಳಜಿ ನಮ್ಮಲ್ಲಿದ್ದರೆ ನಾವು ನಮ್ಮ ಪೀಳಿಗೆ ಇನ್ನಷ್ಟು ಕಾಲ ಬಾಳಿ ಬದುಕ ಬಲ್ಲದು, ಗಿಡ ಮರ ನೆಟ್ಟು ನಮ್ಮ ಜವಾಬ್ದಾರಿ ನಿರ್ವಹಿಸೋಣವೆಂದು ಕರೆ ನೀಡಿದರು. ಇಕೋ ಕ್ಲಬ್ ನ ಸಂಯೋಜಕಿ ಹಾಗೂ ಕಾಲೇಜಿನ ಜೀವಶಾಸ್ತ್ರ ವಿಭಾಗ ಮುಖ್ಯಸ್ಥರಾಗಿರುವ ವಾಣಿ ಎಂ.ಎ.ಇವರು ಕಾರ್ಯಕ್ರಮ ನಿರ್ವಹಿಸಿದರು. ಕಾಲೇಜಿನ ಉಪನ್ಯಾಸಕರು, ಸಿಬ್ಬಂದಿವರ್ಗ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Leave a comment

ಪ್ರಥಮ ಪದವಿಪೂರ್ವ ವಿದ್ಯಾರ್ಥಿಗಳ ಸೇರ್ಪಡೆ ಹಾಗೂ ಮಾಹಿತಿ ಕಾರ್ಯಕ್ರಮ

ವೈಜ್ಞಾನಿಕವಾಗಿ ಮುಂದುವರಿಯುತ್ತಿರುವ ಈ ಜಗತ್ತಿನಲ್ಲಿ ವಿದ್ಯಾರ್ಥಿಗಳು ಕಲಿಕೆಯಲ್ಲಿ ಹೆಚ್ಚಿನ ಮಟ್ಟದಲ್ಲಿ ತೊಡಗಿಸಿಕೊಳ್ಳುವುದು ಅನಿವಾರ್ಯವಾಗಿದೆ. ಪ್ರಥಮ ವರ್ಷದಿಂದಲೇ ಪದವಿ ಪೂರ್ವ ಹಂತದ ಕಲಿಕೆಯಲ್ಲಿ ದಕ್ಷತೆಯನ್ನು ಕಾಯ್ದುಕೊಂಡರೆ ಮುಂದಿನ ದಿನಗಳಲ್ಲಿ ಕಾರ್ಯ ಕ್ಷಮತೆಯನ್ನು ಇನ್ನಷ್ಟು ಹೆಚ್ಚಿಸಿಕೊಳ್ಳಬಹುದು. ಅಂಕಗಳನ್ನು ತುಂಬಿ ತುಂಬಿ ಕಳಿಸುವ ಕ್ರಮ ಹೊಂದಿರುವ ಈಗಿನ ಶಿಕ್ಷಣ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಕಡಿಮೆ ಅಂಕ ಬಂದು ತಕ್ಷಣ ಮಾನಸಿಕವಾಗಿ ಕುಗ್ಗುವಂತಹ ಸ್ಥಿತಿಗತಿಗಳು ಹೆಚ್ಚಿಗೆದ್ದು ಇವುಗಳನ್ನು ಸರಿಯಾದ ರೀತಿಯಲ್ಲಿ ನಿಭಾಯಿಸುವ ,ನಿರ್ವಹಿಸುವ ಗುಣಗಳನ್ನು ವಿದ್ಯಾರ್ಥಿಗಳು ಕಲಿತುಕೊಳ್ಳಬೇಕು. ಮಕ್ಕಳನ್ನು ದಂಡಿಸೋ ಬದಲು ಉದಾಹರಣೆಗಳ ಮೂಲಕ ಹೇಳುವುದರೊಂದಿಗೆ ಮಕ್ಕಳ ಮಾನಸಿಕ ಆರೋಗ್ಯ ಉತ್ತಮಿಕೆ ಸಾಧಿಸುವುದು ಹಾಗಾಗಿ ದಂಡನೆಗೆ ಅವಕಾಶ ಕೊಡದೆ ವಿದ್ಯಾರ್ಥಿ ಮುಂದುವರಿಯಬೇಕು. ಮೊಬೈಲ್, ಟಿವಿಗಳಿಗೆ ಜೋತು ಬಿದ್ದಿದ್ದ ವಿದ್ಯಾರ್ಥಿಗಳು ಇನ್ನು ಮುಂದೆ ಪುಸ್ತಕದ ಗೆಳೆತನವನ್ನು ಬೆಳೆಸಿ ,ಜೊತೆಗೆ ಗ್ರಂಥಾಲಯದ ಸರಿಯಾದ ಬಳಕೆ ,ದಿನಪತ್ರಿಕೆ ಓದುವ ಹವ್ಯಾಸ ಬೆಳೆಸಿಕೊಂಡರೆ ಕಲಿಕೆಗೆ ಪೂರಕವಾಗುವುದು. ಇನ್ನೂ ಚಿಕ್ಕ ಮಕ್ಕಳೆಂಬ ಭ್ರಮೆಯಿಂದ ಹೊರಬಂದು ಜವಾಬ್ದಾರಿಗಳನ್ನು ಹೊತ್ತುಕೊಂಡು ಹೆತ್ತವರ ಜೊತೆ ಆಧ್ಯಾಪಕರ ಜೊತೆ ಸರಿಯಾದ ರೀತಿಯಲ್ಲಿ ಆಪ್ತವಾಗಿ, ಮುಕ್ತವಾಗಿ ಬೆರೆಯುವ ಮನಸ್ಥಿತಿ ಉಳ್ಳವರಾಗಿ ಸಮಸ್ಯೆಯನ್ನ ಬೆಳೆಯಲು ಬಿಟ್ಟು ನಂತರ ಪಶ್ಚತಾಪ ಪಡುವ ಬದಲು ಪ್ರಾರಂಭದಲ್ಲೇ ಸಮಸ್ಯೆಗಳ ಮೂಲ ಹುಡುಕಿ ಪರಿಹಾರವನ್ನು ಕಂಡುಕೊಳ್ಳುವ ಪ್ರಯತ್ನವನ್ನು ಮಾಡಬೇಕು. ‘ದುಬಾರಿ ವಸ್ತುಗಳು ಮನುಷ್ಯನನ್ನು ಸೆಳೆಯಬಲ್ಲದು ಆದರೆ ಅದು ಶಾಶ್ವತವಲ್ಲ, ಅದರೆ ಜೀವನದ ಮೌಲ್ಯಗಳು ಮಾತ್ರ ಶಾಶ್ವತವಾಗಿ ವ್ಯಕ್ತಿಯನ್ನು ಉನ್ನತ ಮಟ್ಟಕ್ಕೆ ಏರಿಸಬಲ್ಲದು. ಹಾಗಾಗಿ ಶಿಕ್ಷಣದ ಜೊತೆಗೆ ಸಂಸ್ಕಾರವೂ ಇರಲಿ,ಎಂದು ಎಸ್.ಡಿ.ಎಂ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಅಶೋಕ್ ಕುಮಾರ್ ಇವರು ವಿದ್ಯಾರ್ಥಿಗಳನ್ನು ಹಾಗೂ ಹೆತ್ತವರನ್ನು ಕುರಿತು ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಸುನಿಲ್ ಪಂಡಿತ್ ಇವರು ಎರಡು ವರ್ಷಗಳ ಕಾಲ ನಿರ್ವಹಿಸುವ ಶೈಕ್ಷಣಿಕ ಜವಾಬ್ದಾರಿಗಳ ಕುರಿತಾಗಿ ವಿದ್ಯಾರ್ಥಿಗಳಿಗೆ ಸಮರ್ಪಕ ಮಾಹಿತಿಯನ್ನು ನೀಡಿದರು. ಗಣಕ ಶಾಸ್ತ್ರದ ಉಪನ್ಯಾಸಕರಾದ ಶ್ರೀಯುತ ಪವಿತ್ರ ಕುಮಾರ್ ಕಾಲೇಜಿನ ಸಿಬ್ಬಂದಿ ವರ್ಗ ಹಾಗೂ ನೀತಿ ನಿಯಮಗಳ ಪರಿಚಯ ಮಾಡಿಕೊಟ್ಟರು. ಗಣಿತಶಾಸ್ತ್ರ ಉಪನ್ಯಾಸಕಿಯಾದ ಶ್ರೀಮತಿ ಧನಲಕ್ಷ್ಮಿ ಇವರು ಶೈಕ್ಷಣಿಕ ಚಟುವಟಿಕೆ ಕುರಿತು ಮಾಹಿತಿ ನೀಡಿದರು. ಭೌತಶಾಸ್ತ್ರ ಉಪನ್ಯಾಸಕರಾದ ಶ್ರೀಯುತ ವಿಕ್ರಂ.ಪಿ ಕಾಲೇಜಿನಲ್ಲಿ ನೀಡಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಸಿಇಟಿ/ನೀಟ್, ಜೆಇಇ ಕುರಿತು ಮಾಹಿತಿ ನೀಡಿದರು. ದೈಹಿಕ ಮಾರ್ಗದರ್ಶಕರಾದ ಶ್ರೀಯುತ ಲಕ್ಷ್ಮಣ್ ಜಿ.ಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾಲೇಜಿನ ಉಪಪ್ರಾಂಶುಪಾಲರಾದ ಶ್ರೀಯುತ ಮನೀಶ್ ಕುಮಾರ್ ಸ್ವಾಗತಿಸಿದರು. ಇಂಗ್ಲೀಷ್ ವಿಭಾಗದ ಉಪನ್ಯಾಸಕರಾದ ಪಾರ್ಶ್ವನಾಥ ಹೆಗಡೆ ನಿರೂಪಿಸಿ, ವಂದಿಸಿದರು.

Leave a comment

ಶೈಕ್ಷಣಿಕ ವರ್ಷಾರಂಭ’ ಹಾಗೂ ವಿದ್ಯಾರ್ಥಿ ಹಾಗೂ ಹೆತ್ತವರಿಗೆ ‘ಮಾಹಿತಿ ಕಾರ್ಯಕ್ರಮ

ಸ್ಪರ್ಧಾತ್ಮಕ ಜಗತ್ತಿನಲ್ಲಿ ನಮ್ಮ ಪ್ರಯತ್ನವನ್ನು ವೈಜ್ಞಾನಿಕವಾಗಿ ಮುಂದುವರಿಸುವ ಸಲುವಾಗಿ ಹೆತ್ತವರ ನಿರೀಕ್ಷೆ, ಭಾವನೆ, ಭರವಸೆಗಳನ್ನು ಈಡೇರಿಸುವ ಉದ್ದೇಶದಿಂದ ಈ ಸಂಸ್ಥೆ ಬಹಳಷ್ಟು ಪ್ರಯತ್ನಗಳನ್ನು ನಡೆಸುತ್ತಿದೆ ಅಲ್ಲದೇ ನಿರೀಕ್ಷೆಗೂ ಮೀರಿದ ಫಲಿತಾಂಶವನ್ನು ಕೂಡ ಕಂಡಿದೆ.ವಸತಿ ಪದವಿ ಪೂರ್ವ ಕಾಲೇಜು ‘ಮಿನಿ ಕರ್ನಾಟಕ’ ಇದ್ದ ಹಾಗೆ ರಾಜ್ಯದ ಹಲವಾರು ಜಿಲ್ಲೆಗಳ ವಿದ್ಯಾರ್ಥಿಗಳು ಇಲ್ಲಿ ಅಭ್ಯಾಸ ನಿರತರಾಗಿದ್ದಾರೆ. ಸ್ವಾಮಿ ಮಂಜುನಾಥನ ಕೃಪೆ, ಸಂಸ್ಥೆಯ ನಿರಂತರ ಪ್ರೋತ್ಸಾಹ, ನುರಿತ ಅಧ್ಯಾಪಕ ವರ್ಗದ ಮಾರ್ಗದರ್ಶನದಲ್ಲಿ ಉತ್ತಮ ಫಲಿತಾಂಶ ದೊರೆತಿದ್ದು, ಮುಂದಿನ ದಿನಗಳಲ್ಲಿ ಹೆತ್ತವರು ನಿಮ್ಮ ಮಕ್ಕಳ ಇನ್ನೂ ಉತ್ತಮ ಫಲಿತಾಂಶವನ್ನು ಕಾಣಲಿದ್ದೀರಿ. ಈ ದಿನ ಹೆತ್ತವರಾದ ನಿಮ್ಮ ಮುಖದಲ್ಲಿ ಕಾಣುತ್ತಿರುವ ಭಯ ,ಆತಂಕ , ತಳಮಳ ಮುಂದಿನ ದಿನಗಳಲ್ಲಿ ಸಂತೃಪ್ತಿಯ ನಗೆಯ ಮೂಲಕ ಮಾಯವಾಗಲಿದೆ. ಹೆತ್ತವರಾದ ನಿಮ್ಮ ನಿರೀಕ್ಷೆಗಳು ಮಿತಿಯಲ್ಲಿ ಇರಲಿ, ತಪೋಭೂಮಿಯಂತಿರುವ ಈ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾರ್ಥಿಗಳ ಗುಣಾತ್ಮಕ ಹಾಗೂ ಮೌಲಿಕ ಬದಲಾವಣೆಗೆ ಸತತ ಪರಿಶ್ರಮವು ನಡೆಯುತ್ತಿದ್ದು, ಮಕ್ಕಳಿಗೆ ಕಲಿಕೆಗೆ ಅತಿಯಾದ ಒತ್ತಡವನ್ನು ಹೇರದೆ ಸವಾಲುಗಳನ್ನು ಎದುರಿಸಲು ಅವರನ್ನು ಸಜ್ಜುಗೊಳಿಸಲಾಗುತ್ತಿದೆ. ಓದುವ , ಓದಿ ಗುರಿ ಮುಟ್ಟುವ ಹಸಿವನ್ನ ವಿದ್ಯಾರ್ಥಿಗಳಲ್ಲಿ ಒಡ ಮೂಡಿಸುವುದು ಆ ಮೂಲಕ ಸಾಧಿಸುವ ಛಲವನ್ನು ತುಂಬಿಸುವುದು ಬಹಳ ಮುಖ್ಯ. ನಮ್ಮ ದೇಹದ ನರವ್ಯೂಹ ವನ್ನು ದುರ್ಬಲ ಗೊಳಿಸುವಂತಹ ಚಿಂತೆಯಿಂದ ದೂರವಿದ್ದು ಕೇವಲ ಆರೋಗ್ಯಪೂರ್ಣ ಮೌಲಿಕ ಶಿಕ್ಷಣವು ಇಂದಿನ ದಿನಗಳಲ್ಲಿ ಅನಿವಾರ್ಯವೆನಿಸಿದೆ ಹೆತ್ತವರ ನಿರೀಕ್ಷೆಗೆ ವಿದ್ಯಾರ್ಥಿಗಳು ಉತ್ತಮ ರೀತಿಯಲ್ಲಿ ಸ್ಪಂದಿಸಿ ಉತ್ತಮ ಕಲಿಕಾರ್ಥಿಯಾಗಿ ಉತ್ತಮ ಅಂಕದ ಜೊತೆಗೆ ನಿಮ್ಮ ವ್ಯಕ್ತಿತ್ವದ ಸರ್ವಾಂಗೀಣ ಬೆಳವಣಿಗೆ ಸಾಧ್ಯವಾಗಿಸಿಕೊಳ್ಳಿ. ಎಂದು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಎಸ್.ಡಿ.ಎಂ ಪದವಿ ಕಾಲೇಜಿನ ಪ್ರಾಚಾರ್ಯರಾದ ಶ್ರೀಯುತ ಡಾ.ಕುಮಾರ್ ಹೆಗ್ಡೆ ಬಿ.ಎ. ದೀಪ ಪ್ರಜ್ವಲನೆಯ ಮೂಲಕ ಮಾತನಾಡಿ , ಶೈಕ್ಷಣಿಕ ವರ್ಷಕ್ಕೆ ಶುಭ ಕೋರಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಶ್ರೀಯುತ ಸುನಿಲ್ ಪಂಡಿತ್ ಅತ್ಯಂತ ಶ್ರದ್ಧೆಯಿಂದ ಕಲಿಕೆಯಲ್ಲಿ ತೊಡಗಿಸಿಕೊಳ್ಳಿ, ಕಾಲೇಜಿನ ತಂಡ ನಿಮ್ಮ ಸಹಾಯಕ್ಕೆ ಸಜ್ಜಾಗಿದ್ದೇವೆ ಎಂದು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ವೇದಿಕೆಯಲ್ಲಿ ಕಾಲೇಜಿನ ಉಪ ಪ್ರಾಂಶುಪಾಲರಾದ ಮನೀಶ್ ಕುಮಾರ್, ದೈಹಿಕ ಶಿಕ್ಷಕರಾದ ಲಕ್ಷ್ಮಣ್ ಜಿ.ಡಿ. ಉಪಸ್ಥಿತರಿದ್ದರು. ಭೌತಶಾಸ್ತ್ರ ಉಪನ್ಯಾಸಕರಾದ ವಿಕ್ರಂ ಪಿ. ವಂದಿಸಿ ನಿರೂಪಿಸಿದರು.

Leave a comment