Skip to content Skip to footer
 +91 8256 237101
 Ujire, Belthangady Taluk, Dakshina Kannada

Author page: admin

ನೂತನ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ

ಸಾಂಸ್ಕೃತಿಕ ಕಾರ್ಯಕ್ರಮಗಳು ಮನರಂಜನೆ ಮೂಲಕ ಸಂಸ್ಕಾರ ಸಂದೇಶ ಗಳ ರವಾನೆಯ ರಹದಾರಿಯಾಗಬೇಕು ಪಠ್ಯೇತರ ಚಟುವಟಿಕೆಗಳು ಕಲಿಕೆಗೆ ಪೂರಕವೂ ಹೌದು. ಹೊಸ ಮಕ್ಕಳು ಈ ಪರಿಸರಕ್ಕೆ ಹೊಂದಿಕೊಳ್ಳಲು ಹಿರಿಯ ವಿದ್ಯಾರ್ಥಿಗಳ ಮಾರ್ಗದರ್ಶನ ಸೂಕ್ತವಾಗಿರಲಿ ನಿಮ್ಮನ್ನು ಅನುಸರಿಸುವಂತಿರಲಿ ಎಂದು ಕಾಲೇಜಿನ ಪ್ರಾಂಶುಪಾಲರಾದ ಶ್ರೀಯುತ ಸುನೀಲ್ ಪಂಡಿತ್ ಹೇಳಿದರು.

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವಸತಿ ಪದವಿಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ‘ನೂತನ ವಿದ್ಯಾರ್ಥಿಗಳಿಗೆ ಸ್ವಾಗತ’ ಕಾರ್ಯಕ್ರಮದಲ್ಲಿ ಮಾತನಾಡಿದರು.ನಂತರ ಹಿರಿಯ ವಿದ್ಯಾರ್ಥಿಗಳು ನೃತ್ಯ, ಸಂಗೀತ, ಸ್ಕಿಟ್ ಮುಂತಾದ ವಿವಿಧ ಕಾರ್ಯಕ್ರಮಗಳ ಮೂಲಕ ವಿದ್ಯಾರ್ಥಿಗಳಿಗೆ ವಿವಿಧ ಆಟಗಳನ್ನು ಆಡಿಸುವುದರೊಂದಿಗೆ ಮನರಂಜಿಸಿದರು.

ಕಾಲೇಜಿನ ಉಪನ್ಯಾಸಕರು, ಗ್ರಂಥ ಪಾಲಕರು, ವಾರ್ಡನ್ಗಳು ಉಪಸ್ಥಿತರಿದ್ದರು, ಸೌರವ್ ಹಾಗೂ ಪೂರ್ವಿಕ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Leave a comment

ಎಸ್. ಡಿ. ಎಂ. ಪದವಿ ಪೂರ್ವ ವಸತಿ ಕಾಲೇಜು ‘ವಿದ್ಯಾರ್ಥಿ ಸಂಘದ ಪದಗ್ರಹಣ’

ಶಿಕ್ಷಣ ಶಿಕ್ಷೆಯೆಂದು ಭಾವಿಸದಿರಿ ಅದು ನಮ್ಮ ಬದುಕು ಕಟ್ಟೋ ದೀವಿಗೆಯಂತೆ. ಪದವಿಪೂರ್ವ ಶಿಕ್ಷಣ ಅವಧಿ ಬಹಳ ಸೂಕ್ಷ್ಮ ಹಾಗೂ ಮಹತ್ವದ್ದು ಆಗಿದ್ದು ಮನಸ್ಸನ್ನು ಅಡ್ಡ ದಾರಿಗೆ ಸೆಳೆದು ಕಲಿಕೆಗೆ ಅಡೆತಡೆಯೊಡ್ದುವ ಮಾಧ್ಯಮಗಳಿಂದ ದೂರವಿರುವುದು ಬಹಳ ಮುಖ್ಯ. ಓದುಗಾರಿಕೆ,ಆಟ,ಯೋಗದ ಮೂಲಕ ಕಲಿಕೆ ಕೇಂದ್ರೀಕರಣಗೊಳಿಸಿದರೆ ಗುರಿ ಮುಟ್ಟಲು ಸಾಧ್ಯ. ಹೆಚ್ಚುತ್ತಿರುವ ತಪ್ಪುಗಳ ಪ್ರಮಾಣದಲ್ಲಿ ಸಂಘರ್ಷಕ್ಕೊಳಗಾದ ಮಕ್ಕಳ ಸಂಖ್ಯೆಯೂ ಹೆಚ್ಚಿದ್ದು ಆ ರೀತಿ ಆಗದಿರಲು ಈ ವಯಸ್ಸಲ್ಲಿ ಮೌಲ್ಯಯುತ ಕಲಿಕೆ ಸಾಧ್ಯವಾಗಬೇಕು, ನಾಯಕತ್ವ ಗುಣಗಳು ವಿದ್ಯಾರ್ಥಿದೆಸೆಯಲ್ಲೇ ಒಡಮೂಡಿಸಿಕೊಳ್ಳುವುದು ಉತ್ತಮವೆಂದು ಮೈಸೂರು ನಗರದ ಮೇಟಗನಹಳ್ಳಿ ಠಾಣೆ ಉಪನಿರೀಕ್ಷಕರಾದ ಹಾಗೂ ಕಾಲೇಜಿನ ಹಳೆ ವಿದ್ಯಾರ್ಥಿ ಶ್ರೀಯುತ ಶಬರೀಶ್ ಯು.ಆರ್ ಹೇಳಿದರು.

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವಸತಿ ಪದವಿಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ‘ವಿದ್ಯಾರ್ಥಿ ಸಂಘದ ಪದಗ್ರಹಣ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿ ತಾನು ಈ ಮಟ್ಟಕ್ಕೆ ಏರಲು ಸಹಕರಿಸಿದ ವಸತಿ ಪದವಿಪೂರ್ವ ಕಾಲೇಜು ಬಗ್ಗೆ ಪ್ರಸಂಶಿಸಿದರು.ವಿದ್ಯಾರ್ಥಿ ಸಂಘದ ಅಧ್ಯಕ್ಷನಾಗಿ ದ್ವಿತೀಯ ವರ್ಷದ ಹರ್ಷಿತ್,ಉಪಾಧ್ಯಕ್ಷನಾಗಿ ಆರ್ಯನ್,ಕಾರ್ಯದರ್ಶಿಯಾಗಿ ವರುಣ್ ಎಚ್.ವಿ., ವಿರೋಧ ಪಕ್ಷದ ನಾಯಕನಾಗಿ ವಿನಯ್ ಸಿ. ಎಂ. ಚುನಾಯಿತಗೊಂಡು ಪದಗ್ರಹಣ ಕಾರ್ಯಕ್ರಮದಲ್ಲಿ ಪ್ರಮಾಣವಚನ ಸ್ವೀಕರಿಸಿದರು.

ಶ್ರೀಯುತ ಶಬರೀಶರು ಕಲಿಕಾರ್ಥಿ ಸಂದರ್ಭದಲ್ಲಿಯೇ ಅತ್ಯಂತ ಪ್ರತಿಭಾನ್ವಿತರಾಗಿದ್ದು ಕಲಿಕೆ ಹಾಗೂ ಸ್ಪೋರ್ಟ್ಸ್ ವಿಷಯಗಳಲ್ಲಿ ಆಸಕ್ತಿಯಿಂದ ತೊಡಗಿಸಿಕೊಂಡ ಕಾರಣ ಈ ಮಟ್ಟಕ್ಕೆ ಏರಲು ಸಾಧ್ಯವಾಗಿದೆ. ನಾಯಕತ್ವದ ಜವಾಬ್ದಾರಿ ಮುಂದಿನ ಭವಿಷ್ಯಕ್ಕೆ ಪೂರಕ. ಅನಗತ್ಯ ಆಕರ್ಷಣೆಗಳಿಗೆ ಒಳಗಾಗದೇ ಬದುಕು ಸುಂದರಗೊಳಿಸಿಯೆಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಸುನಿಲ್ ಪಂಡಿತ್ ಹೇಳಿದರು. ಕಾಲೇಜಿನ ಉಪನ್ಯಾಸಕರು, ಗ್ರಂಥ ಪಾಲಕರು, ವಾರ್ಡನ್ಗಳು ಉಪಸ್ಥಿತರಿದ್ದರು ಕಾಲೇಜಿನ ಉಪನ್ಯಾಸಕರಾದ ಪವಿತ್ರ ಕುಮಾರ್ ನಿರೂಪಿಸಿ,ವಂದಿಸಿದರು.

Leave a comment

ಶ್ರೀ ಧರ್ಮಸ್ಥಳ ಸಂಸ್ಕೃತಿ ಸಂಶೋಧನಾ ಪ್ರತಿಷ್ಠಾನಕ್ಕೆ ಭೇಟಿ

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವಸತಿ ಪದವಿಪೂರ್ವ ಕಾಲೇಜಿನ ‘ಕನ್ನಡ ಸಂಘ’ದ ವತಿಯಿಂದ ವಿದ್ಯಾರ್ಥಿಗಳು ಶ್ರೀ ಧರ್ಮಸ್ಥಳ ಸಂಸ್ಕೃತಿ ಸಂಶೋಧನಾ ಪ್ರತಿಷ್ಠಾನಕ್ಕೆ ಭೇಟಿ ನೀಡಿ ಪುರಾತನ ಸಾಹಿತ್ಯದ ಪರಿಕರಗಳನ್ನು ವೀಕ್ಷಿಸಿದರು. ಕೈಯಲ್ಲಿ ಮುದ್ರಿಸಲಾದ ಹಾಳೆಗಳಲ್ಲಿ ಚಿನ್ನದ ಮಿಶ್ರಣವನ್ನು ಸೇರಿಸಿ ಬರೆಯಲಾದ ಲಿಪಿಗಳು ಹಾಗೂ ಹಿಂದಿನ ತಾಳೆಗರಿಗಳು ಪುಸ್ತಕಗಳು ಹಾಗೂ ಲಿಪಿಗಳನ್ನು ಸಂಗ್ರಹಿಸಿ ಸಂರಕ್ಷಿಸುವ ವಿಧಾನವನ್ನು ವಿದ್ಯಾರ್ಥಿಗಳು ತಿಳಿದುಕೊಂಡರು.

ಧರ್ಮಸ್ಥಳ ಸಂಸ್ಕೃತಿ ಸಂಶೋಧನ ಪ್ರತಿಷ್ಠಾನದ ನಿರ್ದೇಶಕರಾದ ಡಾ| ವಿಘ್ನರಾಜರು ವಿದ್ಯಾರ್ಥಿಗಳಿಗೆ ಭಾರತೀಯ ಲಿಪಿಗಳ ವಂಶವೃಕ್ಷದ ವಿವರಣೆ ನೀಡುತ್ತಾ ಬ್ರಾಹ್ಮಿ, ದೇವನಾಗರಿ,ಖರೋಷ್ಠಿ,ಶಾರದಾ ಅಸ್ಸಾಮಿ, ಪಂಜಾಬಿ, ಮಳೆಯಾಳಂ, ತುಳು ಕನ್ನಡ ಹಾಗೂ ಇತರ ಲಿಪಿಗಳ ಹುಟ್ಟಿನ ಕುರಿತು ವಿವರಣೆ ನೀಡಿದರು. ಸುಮಾರು 350ಕ್ಕೂ ಹೆಚ್ಚಿನ ತಾಳೆಗರಿಗಳ ಕಟ್ಟುಗಳು,ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಾಲಯದ ಹಳೆಯ ಕಡತಗಳನ್ನು ವಿದ್ಯಾರ್ಥಿಗಳಿಗೆ ತೋರಿಸಿಕೊಟ್ಟರು. ತಾಳೆಗರಿಗಳನ್ನು ಸಂರಕ್ಷಿಸುವ ವಿಧಾನಗಳ ಕುರಿತು ಅದರ ಅಧ್ಯಯನ ಪ್ರಕ್ರಿಯೆಯ ಕುರಿತು ಮಾಹಿತಿ ನೀಡಿದರು. ಸಂಶೋಧನಾ ಪ್ರತಿಷ್ಠಾನದಲ್ಲಿ ಸಂಗ್ರಹಿಸಲಿಟ್ಟಿರುವ ಶ್ರೇಷ್ಠ ಕವಿಗಳ ಹಸ್ತಾಕ್ಷರದಿಂದ ಬರೆದ ಕಾವ್ಯದ ಪ್ರತಿ ಪ್ರಾಚೀನ ಕವಿಗಳ ಕಾವ್ಯಗಳು ಆಯುರ್ವೇದ, ವೇದ ಉಪನಿಷತ್ಗಳ ಸಂಗ್ರಹಗಳ ಬಗ್ಗೆ ಮಾಹಿತಿ ನೀಡಿದರು. ಪೂಜ್ಯಖಾವಂದರು ಪ್ರತಿಷ್ಠಾನದ ಕುರಿತು ಹೊಂದಿರುವ ತೀವ್ರ ಕಾಳಜಿಯಿಂದ ಒದಗಿಸುವ ಸವಲತ್ತುಗಳ ಬಗ್ಗೆ ತಿಳಿಸಿ ಅಧ್ಯಯನಶೀಲರಾಗಿ ಎಂದು ಮಕ್ಕಳಿಗೆ ಕಿವಿ ಮಾತು ಹೇಳಿದರು. ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಸುನೀಲ್ ಪಂಡಿತ್, ಗಣಿತಶಾಸ್ತ್ರ ಉಪನ್ಯಾಸಕಿ ಧನಲಕ್ಷ್ಮೀ, ಕನ್ನಡ ವಿಭಾಗದ ಉಪನ್ಯಾಸಕಿ ಹಾಗೂ ಕನ್ನಡ ಸಂಘದ ಸಂಯೋಜಕಿ ಕವಿತಾ ಉಮೇಶ್,ಕಾಲೇಜಿನ ಗ್ರಂಥಪಾಲಕರಾದ ಶ್ರೀ ಗಿರಿಧರ್, ಕಾಲೇಜು ನಿಲಯಪಾಲಕರು ವಿದ್ಯಾರ್ಥಿಗಳ ಜೊತೆಗಿದ್ದರು.

Leave a comment

ವ್ಯಕ್ತಿತ್ವ ವಿಕಸನ ಕಾರ್ಯಾಗಾರ

ವಿದ್ಯಾರ್ಥಿದೆಸೆಯಲ್ಲಿ ಬದುಕಿನ ಮೌಲ್ಯಗಳನ್ನು ಅರ್ಥೈಸುತ್ತಾ, ಎಲ್ಲಾ ರೀತಿಯ ಜೀವನ ಕೌಶಲ ಕಲೆಗಳನ್ನು ಕರಗತ ಮಾಡಿಕೊಂಡು ಸಂಪೂರ್ಣರಾಗುವತ್ತ ಸಂಕಲ್ಪ ಮಾಡಿಕೊಳ್ಳಬೇಕು, ಏನೇನು ಮಾಹಿತಿಗಳು ಸಿಗುವುದೋ ಅವೆಲ್ಲವನ್ನು ನೆನಪಿನ ಬುತ್ತಿಯಲ್ಲಿ ತುಂಬಬೇಕು, ಸಾಮಾನ್ಯ ಜ್ಞಾನ ಸಂಪಾದನೆ ಮೂಲಕ ನಮ್ಮ ಸುತ್ತ ಮುತ್ತನ ಆಗು-ಹೋಗುಗಳ ಪರಿಚಯ, ಪ್ರಜ್ಞೆ ಇರಬೇಕು ಉನ್ನತ ಧ್ಯೇಯ ದೊಂದಿಗೆ ಗುರಿಯತ್ತ ಸಾಗಬೇಕು ಲೋಕ ಉದ್ಧಾರಕರಾಗುತ್ತೇವೋ ಇಲ್ಲವೋ ಅದರೆ ಲೋಕ ಕಂಟಕರಾಗುವ ಚಟುವಟಿಕೆಯಲ್ಲಿ ಯಾವತ್ತೂ ತೊಡಗಿಸಿಕೊಳ್ಳಬೇಡಿ. ದೇಶ, ಭಾಷೆ ಕುರಿತು ಅಭಿಮಾನವಿರಲಿ ಎಂದು ಹೇಳಿದರು.

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವಸತಿ ಪದವಿಪೂರ್ವ ಕಾಲೇಜಿನಲ್ಲಿ ನಡೆದ ‘ವ್ಯಕ್ತಿತ್ವ ವಿಕಸನ ಕಾರ್ಯಾಗಾರ’ದಲ್ಲಿ ನಿವೃತ್ತ ಉಪನ್ಯಾಸಕರಾದ ಶೀಯುತ ಗೋಪಾಲ ಪಟುವರ್ಧನರು ವಿದ್ಯಾರ್ಥಿಗಳಿಗೆ ವಿವಿಧ ಮನರಂಜನೆ ಚಟುವಟಿಕೆಗಳ ಮೂಲಕ,ಮಾಹಿತಿ ನೀಡಿದರು. ಕಾಲೇಜಿನ ಪ್ರಾಚಾರ್ಯರಾದ ಸುನೀಲ್ ಪಂಡಿತರು ಉಪಸ್ಥಿತರಿದ್ದರು. ರಾಸಾಯನ ಶಾಸ್ತ್ರದ ಉಪನ್ಯಾಸಕಿ ಚೈತ್ರ ಪ್ರಭು ಕಾಲೇಜಿನ ಪರವಾಗಿ ಗೌರವ ಕಾಣಿಕೆ ನೀಡಿದರು.ಕಾಲೇಜಿನ ಗಣಿತಶಾಸ್ತ್ರ ಉಪನ್ಯಾಸಕರಾದ ಕೃಷ್ಣಪ್ರಸಾದ್ ನಿರೂಪಿಸಿ, ವಂದಿಸಿದರು.

Leave a comment

ಮೌಲ್ಯ ಆಧಾರಿತ ತರಗತಿಗಳ ಉದ್ಘಾಟನೆ

ಶ್ರೀ ಕೃಷ್ಣ ಭಗವದ್ಗೀತೆ ಬೋಧನೆ ಮೂಲಕ ಗುರುವಾದ,ವಸುದೇವ ದೇವಕಿಗೆ ನೀಡಿದ ಪರಮಾನಂದದಿಂದ ಜಗದ್ಗುರು ಎನಿಸಿಕೊಂಡ ಪರಮಾತ್ಮನಾದ.ಯಾವ ವಿದ್ಯಾರ್ಥಿಗಳು ತಂದೆ, ತಾಯಿ,ಗುರುಗಳಿಗೆ ಭಕ್ತಿ,ಪ್ರೀತಿ, ವಿಧೇಯತೆ ತೋರುವರೋ ಅಂತವರು ಉತ್ತರೋತ್ತರ ಅಭಿವೃದ್ದಿ ಹೊಂದುವರು. ಮೌಲ್ಯತುಂಬಿದ ಬದುಕು ಎಲ್ಲಕ್ಕಿಂತ ಶ್ರೇಷ್ಠ. ದುರ್ಗುಣಗಳಿಂದ ದೂರ ಇದ್ದು ತಪ್ಪುಗಳನ್ನು ಒಪ್ಪಿಕೊಂಡು ಮುಂದೆ ತಪ್ಪಾಗದಂತೆ ಸಾಗುವ ಮನಸ್ಥಿತಿ ಬೆಳಿಸಿಕೊಳ್ಳಬೇಕು.ವಾದ -ವಿವಾದದಲ್ಲಿ ದಿನ ಕಳೆಯದೆ ಕೆಲಸದ ಮೂಲಕ ಸಾಧನೆ ತೋರುವವರಾಗಬೇಕು ,ಮಾತಿಗಿಂತ ಮೌನವೇ ಬೆಲೆಯುಳ್ಳದ್ದು ಎಂಬಂತೆ ಎಲ್ಲಿ ಅವಶ್ಯವೋ ಅಲ್ಲಿ ಮಾತ್ರವೇ ಮಾತಿರಲಿ.ಅಂಕ ಗಳಿಕೆಯೊಂದಿಗೆ ಮೌಲ್ಯಧಾರಿತ ಬದುಕಿನ ಗಳಿಕೆಯು ಬಹುಮುಖ್ಯ ಎಂದು ಎಸ್. ಡಿ.ಎಮ್ ಪದವಿ ಕಾಲೇಜಿನ ಸಂಸ್ಕೃತ ವಿಭಾಗದ ಮುಖ್ಯಸ್ಥರಾಗಿರುವ ಡಾ. ಶ್ರೀಧರ್ ಎನ್ ಭಟ್ ಹೇಳಿದರು.

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವಸತಿ ಪದವಿಪೂರ್ವ ಕಾಲೇಜಿನಲ್ಲಿ ‘ಮೌಲ್ಯಧಾರಿತ ತರಗತಿಗಳ ಉದ್ಘಾಟನೆ‘ ನೆರವೇರಿಸಿ ವಿದ್ಯಾರ್ಥಿಗಳನ್ನು ಕುರಿತು ಮಾತನಾಡಿದರು. ಕಾಲೇಜಿನ ಪ್ರಾಚಾರ್ಯರಾದ ಸುನೀಲ್ ಪಂಡಿತ್ ಇವರು ಎಸ್. ಡಿ. ಎಮ್. ಸಂಸ್ಥೆ ಮೌಲ್ಯಧಾರಿತ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದು, ವರ್ಷಪೂರ್ತಿ ಮೌಲ್ಯಯುತ ಕಾರ್ಯಕ್ರಮಗಳನ್ನು ನಡೆಸಲಿದೆ ಇದರ ಪ್ರಯೋಜನ ಪಡೆದುಕೊಳ್ಳಿ ಹಾಗೂ ಬದುಕಲ್ಲಿ ಅಳವಡಿಸಿಕೊಳ್ಳಿ ಎಂದರು. ಕಾಲೇಜಿನ ನಿಲಯ ಪಾಲಕರು ಹಾಗೂ ದೈಹಿಕ ಶಿಕ್ಷಕರಾಗಿರುವ ಲಕ್ಷ್ಮಣ್ ಗೌಡ ಜಿ. ಉಪಸ್ಥಿತರಿದ್ದರು. ಕಾಲೇಜಿನ ಗಣಿತಶಾಸ್ತ್ರ ಉಪನ್ಯಾಸಕರಾದ ಕೃಷ್ಣಪ್ರಸಾದ್ ನಿರೂಪಿಸಿ, ವಂದಿಸಿದರು.

Leave a comment

Orientation for II PUC

Orientation programme was arranged For II PUC on 1/6/2023. Mr.Sunil Pandit presided over the programme. Mr.Harish M.Y Executive officer of SDM Institution and Mr.Somashekar Shetty SWO were chief guests. Mr.Vikram hosted the programme.

Leave a comment

Farewell Ceremony

Farewell programme arranged for two staff members who are leaving the college. Dr Naganna is promoted as Assistant professor Department of Kannada in SDM Degree College Ujire. Mr Shourya tutor is farewelled from the college.

Leave a comment