Skip to content Skip to footer
 +91 8256 237101
 Ujire, Belthangady Taluk, Dakshina Kannada

Author page: admin

ಜೀವನ ಕಲೆ ವೃದ್ಧಿ ಕಾರ್ಯಾಗಾರ

ಕೇವಲ ಪಠ್ಯಗಳೊಂದಿಗಿನ ಕಲಿಕೆ ಜೀವನದ ಪಥದಲ್ಲಿ ಪೂರ್ಣ ಫಲ ನೀಡಲಾರದು ಹಾಗಾಗಿ ಕಲಿಕೆಯೊಂದಿಗೆ ಬದುಕಿನ ಪಾಠಗಳನ್ನು ವಿದ್ಯಾರ್ಥಿಗಳಿಗೆ ನೀಡಬೇಕು. ವಿದ್ಯಾರ್ಥಿದೆಸೆಯಲ್ಲಿ ಆತ್ಮವಿಶ್ವಾಸ, ಏನೇ ಬಂದರೂ ಎದುರಿಸುವ ಧೈರ್ಯ, ಉತ್ತಮ ಸಂವಹನ ಕಲೆ ಕರಗತಗೊಳ್ಳಬೇಕು. ಪಲಾಯನವಾದಿಗಳಾಗದೆ ಎಲ್ಲವನ್ನು ಕುತೂಹಲದಿಂದ ಗ್ರಹಿಸುವ,ಕಾಣುವ, ಕಲಿಯುವ ಹಂಬಲ ರೂಡಿಸಿಕೊಳ್ಳಬೇಕು, ಹಾಗಾದಾಗ ಭವಿಷ್ಯದಲ್ಲಿ ಬದುಕ ಕಟ್ಟುವ ಕ್ರಮ ಕ್ಲಿಷ್ಟವಾಗದುಯೆಂದರು.

ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗಾಗಿ ‘ಮಾನವಸಂಪನ್ಮೂಲ ಹಾಗೂ ವೃತ್ತಿ ಮಾರ್ಗದರ್ಶನ’ ತಂಡದ ವತಿಯಿಂದ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದ್ದ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಎಸ್.ಜಿ ಭಟ್ ಅವರು ಮಾತನಾಡುತ್ತ, ಉದಾಹರಣೆ ಹಾಗೂ ವಿಭಿನ್ನ ಆಟಗಳ ಮೂಲಕ ವಿದ್ಯಾರ್ಥಿಗಳಿಗೆ ಜೀವನ ಕಲೆ ವೃದ್ಧಿ ಬಗ್ಗೆ ತಿಳಿಸಿದರು. ಕಾರ್ಯಕ್ರಮದಲ್ಲಿ ತಂಡದ ಸಂಯೋಜಕರು ಹಾಗೂ ಕಾಲೇಜಿನ ರಾಸಾಯನ ಶಾಸ್ತ್ರ ಉಪನ್ಯಾಸಕಿ ಆದ ಶ್ರೀಮತಿ ಚೈತ್ರಪ್ರಭು ಹಾಗೂ ಗಣಿತಶಾಸ್ತ್ರದ ಉಪನ್ಯಾಸಕರಾದ ಕೃಷ್ಣಪ್ರಸಾದ್ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ವಿದ್ಯಾರ್ಥಿಗಳೊಂದಿಗೆ ಕಾಲೇಜಿನ ಉಪ ಪ್ರಾಂಶುಪಾಲರಾದ ಸುನಿಲ್ ಪಂಡಿತ್ ಜೊತೆಗಿದ್ದು ವಿದ್ಯಾರ್ಥಿಗಳ ಬೆನ್ನು ತಟ್ಟಿ ಪ್ರೋತ್ಸಾಹಿಸಿದರು.ಜೀವಶಾಸ್ತ್ರ ಉಪನ್ಯಾಸಕರಾದ ಪ್ರದೀಪ್ ಹಾಗೂ ರಾಸಾಯನ ಶಾಸ್ತ್ರದ ಉಪನ್ಯಾಸಕಿ ಚೈತ್ರ ಉಪಸ್ಥಿತರಿದ್ದರು.

Leave a comment

ಕಾಲೇಜು ‘ಗೋಡೆ ಬರಹ’ ಅನಾವರಣ

ವಿದ್ಯಾರ್ಥಿಗಳ ಜ್ಞಾನ ಭಂಡಾರದ ವೃದ್ಧಿಗಾಗಿ ಇರುವ ‘ಸ್ಮೃತಿ’ ಹೆಸರಿನ ಕಾಲೇಜಿನ ಗೋಡೆ ಬರಹಕ್ಕೆ ವಿದ್ಯಾರ್ಥಿಗಳೇ ತಯಾರಿಸಿದ ವಿಶೇಷ ಸಂಚಿಕೆಯನ್ನು ಅಂಟಿಸಿ ಅನಾವರಣಗೊಳಿಸಲಾಯಿತು. ಪೂಜ್ಯ ಖಾವಂದರ ಬಾಲ್ಯ, ಜೀವನ, ಸಾಧನೆಗಳನ್ನೊಳಗೊಂಡ ಈ ಗೋಡೆ ಬರಹ,ಚಿತ್ರಗಳ ಚಿತ್ತಾರಗಳೊಂದಿಗೆ ಗಮನಸೆಳೆಯಿತು.

ಈ ಸಂದರ್ಭದಲ್ಲಿ ವಿದ್ಯಾರ್ಥಿಗಳೊಂದಿಗೆ ಕಾಲೇಜಿನ ಪ್ರಾಂಶುಪಾಲರಾದ ಸುನಿಲ್ ಪಂಡಿತ್ ಜೊತೆಗಿದ್ದು ವಿದ್ಯಾರ್ಥಿಗಳ ಬೆನ್ನು ತಟ್ಟಿ ಪ್ರೋತ್ಸಾಹಿಸಿದರು.ಜೀವಶಾಸ್ತ್ರ ಉಪನ್ಯಾಸಕರಾದ ಪ್ರದೀಪ್ ಹಾಗೂ ರಾಸಾಯನ ಶಾಸ್ತ್ರದ ಉಪನ್ಯಾಸಕಿ ಚೈತ್ರ ಉಪಸ್ಥಿತರಿದ್ದರು.

Leave a comment

ಸಂಭ್ರಮದ ಸ್ವಾತಂತ್ರೋತ್ಸವ ಆಚರಣೆ

77ನೇ ಸ್ವಾತಂತ್ರ ದಿನಾಚರಣೆಯನ್ನು ದಿಶಾ ಸಮೂಹ ಸಂಸ್ಥೆಯ ಮಾಲಿಕರಾದ ರೋಟೆರಿಯನ್ ಅರುಣ್ ಕುಮಾರ್ ಧ್ವಜಾರೋಹಣದ ಮೂಲಕ ಧ್ವಜ ವಂದನೆ ನೆರವೇರಿಸಿದರು. ದೇಶದ ಹೆಮ್ಮೆಯ ಪ್ರತೀಕವಾದ ರಾಷ್ಟಗೀತೆಯನ್ನು ಹಾಡಿದರು. ಬ್ರಿಟಿಷರಿಂದ ದೇಶವನ್ನು ಬಂಧಮುಕ್ತಗೊಳಿಸಲು ಹೋರಾಟ ಮಾಡಿ ಮಡಿದ ವೀರರ ಸ್ಮರಣೆಯೊಂದಿಗೆ ಭಾರತ ಮಾತೆಯ ಮಡಿಲ ಮಕ್ಕಳಾದ ನಾವೆಲ್ಲರೂ ಒಗ್ಗಟ್ಟಿನಿಂದ ಬಾಳಿ ಬದುಕುವ,ದೇಶದ ಸಂಸ್ಕೃತಿ, ನಂಬಿಕೆಗಳನ್ನು ಎಂದೂ ಹುಸಿಗೊಳಿಸದೆ ಉತ್ತಮ ಆರೋಗ್ಯವಂತ ನಾಗರೀಕರಾಗೋಣವೆಂಬ ಸಂದೇಶ ನೀಡಿದರು.

ಪ್ರಾಂಶುಪಾಲರಾದ ಸುನಿಲ್ ಪಂಡಿತ್, ಉಪ ಪ್ರಾಂಶುಪಾಲರಾದ ಮನೀಷ್ ಕುಮಾರ್ ,ವಿದ್ಯಾರ್ಥಿಗಳು,ಉಪನ್ಯಾಸಕರು, ಕಾಲೇಜಿನ ವಾರ್ಡನ್ಗಳು, ಸಿಬ್ಬಂದಿ ವರ್ಗ ಎಲ್ಲರೂ ಉಪಸ್ಥಿತರಿದ್ದರು. ಧ್ವಜಾರೋಹಣ ಪ್ರಕ್ರಿಯೆಯಲ್ಲಿ ದೈಹಿಕ ಶಿಕ್ಷಕ ಲಕ್ಷ್ಮಣ್ ಜಿ. ಡಿ. ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿ ಉಜ್ವಲ್ ಎನ್ ಜಿಂಗಾಡೆ ಸಹಕರಿಸಿದರು.ಕಾರ್ಯಕ್ರಮದ ಕೊನೆಯಲ್ಲಿ ಎಲ್ಲರಿಗೂ ಸಿಹಿ ಹಂಚಲಾಯಿತು.

Leave a comment

ಸ್ಮೃತಿ” ದ್ವೈ ವಾರ್ಷಿಕ ಸಂಚಿಕೆಯ ಬಿಡುಗಡೆ

ಕಾಲೇಜಿನ ವಿದ್ಯಾರ್ಥಿಗಳ ಬರಹ, ಲೇಖನ, ಚಿತ್ರಕಲೆಯಂತಹ ಪ್ರತಿಭೆಗಳ ಹೂರಣದ ಕನಸಿನ ಬುತ್ತಿ “ಸ್ಮೃತಿ” ದ್ವೈ ವಾರ್ಷಿಕ ಸಂಚಿಕೆಯನ್ನು ಪೂಜ್ಯ ಖಾವಂದರು ಬಿಡುಗಡೆಗೊಳಿಸಿ, ಶುಭ ಹಾರೈಸಿದರು. ಸಂಚಿಕೆಯನ್ನು ಅವಲೋಕಿಸಿ ಇನ್ನಷ್ಟು ವಿದ್ಯಾರ್ಥಿ ಪ್ರತಿಭೆಗಳು ಮುಂದಿನ ದಿನಗಳಲ್ಲಿ ಬೆಳಕಿಗೆ ಬರುವಂತಾಗಲಿಯೆಂದರು.

“ನ್ಯಾಷನಲ್ ಇನ್ನೋವೇಶನ್ ಫೌಂಡೇಶನ್” ಸಂಸ್ಥೆ ನಡೆಸುವ ‘ಮಾನಕ್’ ಪರೀಕ್ಷೆಯಲ್ಲಿ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ಮಂಜುನಾಥ್ ಆರ್ ಮಾಸನ್ನವರ್ ತಯಾರಿಸಿದ ಮಾದರಿ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ ಆಗಿದ್ದ ಹಿನ್ನಲೆಯಲ್ಲಿ ಪೂಜ್ಯ ಖಾವಂದರ ಶುಭ ಹಾರೈಕೆ ಹಾಗೂ ಆಶೀರ್ವಾದವನ್ನು ಪಡೆದನು. ಕಾಲೇಜಿನ ಪ್ರಾಂಶುಪಾಲರಾದ ಶ್ರೀಯುತ ಸುನಿಲ್ ಪಂಡಿತ್, ಉಪ ಪ್ರಾಂಶುಪಾಲರಾದ ಶ್ರೀಯುತ ಮನೀಶ್ ಕುಮಾರ್, ಭೌತಶಾಸ್ತ್ರ ವಿಭಾಗದ ಮುಖ್ಯಸ್ಥರಾದ ರಮೇಶ್ ಬಾಬು, ಇಂಗ್ಲೀಷ್ ಉಪನ್ಯಾಸಕರು ಹಾಗೂ “ಸ್ಮೃತಿ” ದ್ವೈ ವಾರ್ಷಿಕ ಸಂಚಿಕೆ ಸಂಯೋಜಕರಾದ ಪಾರ್ಶ್ವನಾಥ ಹೆಗ್ಡೆ ಉಪಸ್ಥಿತರಿದ್ದರು.

Leave a comment

ಮುದ್ರಣ ಯಂತ್ರ ಹಾಗೂ ಕಾರ್ಯಗಳ ವೀಕ್ಷಣೆ

ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗ ಹಾಗೂ ಟೆಕ್ನೋ ಕ್ಲಬ್ ವತಿಯಿಂದ ಮಂಜುಶ್ರೀ ಪ್ರಿಂಟರ್ಸ್ ಉಜಿರೆಗೆ ಭೇಟಿ ನೀಡಲಾಯಿತು. ಕಾಲೇಜಿನ ವಿದ್ಯಾರ್ಥಿಗಳು ಅಲ್ಲಿಗೆ ಭೇಟಿ ನೀಡಿ ಮುದ್ರಣ ವಿಭಾಗದಲ್ಲಿ ನಡೆಯುವ ಮುದ್ರಣ ಕಾರ್ಯ ಚಟುವಟಿಕೆಗಳ ಹಾಗೂ ಅಲ್ಲಿ ಉಪಯೋಗಿಸುವ ಅನೇಕ ಯಂತ್ರಗಳ ಬಗ್ಗೆ ಉಪಯುಕ್ತ ಮಾಹಿತಿಗಳನ್ನು ಅಲ್ಲಿನ ಸಿಬ್ಬಂದಿಗಳಿಂದ ಪಡೆದರು. ಅಲ್ಲಿನ ಕಾರ್ಯ ಚಟುವಟಿಕೆಗಳನ್ನು ವೀಕ್ಷಿಸಿದ ವಿದ್ಯಾರ್ಥಿಗಳು , ಮೊದಲ ಬಾರಿ ಈ ರೀತಿಯ ಮುದ್ರಣದ ಕಾರ್ಯಚಟುವಟಿಕೆಗಳ ಬಗ್ಗೆ ತಿಳಿದುಕೊಂಡೆವು ಎಂದರು.ಮುದ್ರಣದ ಬಗೆಗಿನ ಹಲವು ವೈಶಿಷ್ಟತೆಗಳ ಬಗ್ಗೆ ಸಿಬ್ಬಂದಿಗಳು ಬಹಳ ಅದ್ಭುತವಾಗಿ ವಿವರಿಸಿದರು.

ಮಂಜುಶ್ರೀ ಪ್ರಿಂಟರ್ಸ್ ನ ಮ್ಯಾನೇಜರ್ ಶೇಖರ್, ರವಿ ಹಾಗೂ ಇನ್ನಿತರ ಸಿಬ್ಬಂದಿಗಳು ಸಹಕರಿಸಿದರು. ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳೊಂದಿಗೆ ಕಾಲೇಜಿನ ಉಪ ಪ್ರಾಂಶುಪಾಲರಾದ ಮನೀಷ್ ಕುಮಾರ್, ಉಪನ್ಯಾಸಕರಾದ ಪವಿತ್ರ ಕುಮಾರ್, ಕೃಷ್ಣಪ್ರಸಾದ್ ಉಪಸ್ಥಿತರಿದ್ದರು.

Leave a comment

ಡ್ರ್ಯಾಗನ್ ಫ್ರೂಟ್ ಕೃಷಿಯ ಬಗ್ಗೆ ಮಾಹಿತಿ

ನಿವೃತ್ತ ಸೈನಿಕ ಶ್ರೀಯುತ ಗೋಪಾಲಕೃಷ್ಣ ಭಟ್ ಕಾಂಚೋಡು ಇವರು ತಮಗೆ ಸರಕಾರ ನೀಡಿದ ಜಾಗದಲ್ಲಿ ಡ್ರ್ಯಾಗನ್ ಫ್ರೂಟ್ ನ ಸಾವಯವ ಮಾದರಿ ಕೃಷಿಯಲ್ಲಿ ತೊಡಗಿಸಿಕೊಂಡಿದ್ದು ಪ್ರಗತಿಪರ ಕೃಷಿಕರೆಂದು ಗುರುತಿಸಿಕೊಂಡು ಗೌರವ ಡಾಕ್ಟರೇಟ್ ಕೂಡ ಪಡೆದಿದ್ದು, ಇವರ ಸಾಧನೆಯ ಕೃಷಿ ಕಾರ್ಯವನ್ನು ಇಕೋ ಕ್ಲಬ್ ನ ಸಹಯೋಗದಲ್ಲಿ ವಿದ್ಯಾರ್ಥಿಗಳು ವೀಕ್ಷಿಸಿದರು. ಕೃಷಿ ಕುರಿತಾಗಿ ಹೆಚ್ಚಿನ ಮಾಹಿತಿಗಳನ್ನು ಕಲೆ ಹಾಕಿದರು, ರುಚಿ ರುಚಿಯಾದ ಡ್ರ್ಯಾಗನ್ ಫ್ರೂಟ್ ನ್ನು ಸವಿದರು. ಕಾಲೇಜಿನ ಪ್ರಾಂಶುಪಾಲರಾದ ಸುನಿಲ್ ಪಂಡಿತ್ ಉಪಸ್ಥಿತರಿದ್ದರು.ಇಕೋಕ್ಲಬ್ ನ ಸಂಚಾಲಕರಾದ ಶ್ರೀಮತಿ ವಾಣಿ ಎಂ. ಎ., ಜೀವಶಾಸ್ತ್ರ ಉಪನ್ಯಾಸಕರಾದ ಪ್ರದೀಪ್.ಕೆ ಹಾಗೂ ಕಾಲೇಜಿನ ಉಪನ್ಯಾಸಕರು ಉಪಸ್ಥಿತರಿದ್ದರು.

Leave a comment

ಯಾಂತ್ರೀಕೃತ ಭತ್ತದ ನಾಟಿಯ ಪ್ರಾತ್ಯಾಕ್ಷಿಕೆ

ಭೂಮಿ ತಾಯಿ ನಮ್ಮೆಲ್ಲರ ಹಸಿವನ್ನು ತಣಿಸೋ ಕರುಣಾಮಯಿ ಮಳೆಗೆ ಭೂಮಿ ತಣಿದು ಹಸನುಗೊಂಡು ನಾಟಿಗೆ ಸಜ್ಜಾಗಿದೆ. ಹೊಸ ಯಾಂತ್ರಿಕ ವಿಧಾನಗಳು ಇಂದು ಭತ್ತ ಕೃಷಿಯಲ್ಲಿ ವೇಗದ ನಾಟಿಗೆ ಸಾಧ್ಯಮಾಡಿಕೊಟ್ಟಿದೆ, ಕಷ್ಟಪಟ್ಟು ಬೆಳೆಸೋ ಅನ್ನವನ್ನು ಹಾಳು ಪೋಲು ಮಾಡದೇ ಒಂದೊಂದು ಅಗುಳನ್ನು ದೇವರೆಂದು ಬಗೆಯೋಣ. ಭೂಮಿಯ ಎಲ್ಲಾ ಜೀವಿಗೂ ಅನ್ನ ಆಹಾರ ಸಿಗುವಂತಾಗಲಿ. ಇಂದು ಕೃಷಿ ಉದ್ಯೋಗದ ಮೂಲವು ಆಗಿದ್ದು,ಕೃಷಿಯ ಮೂಲಕ ಸೃಷ್ಟಿಯಾಗೋ ಉದ್ಯೋಗಗಳ ಮಾಹಿತಿ ಇಂದಿನ ಮಕ್ಕಳಿಗೆ ದೊರಕುವಂತಾಗಬೇಕೆಂದು ನೀರಚಿಲುಮೆಯ ‘ನಿನಾದ’ದ ಕೀರ್ತಿಶೇಷ ಯಶೋವರ್ಮರ ಧರ್ಮಪತ್ನಿ ಸೋನಿಯಾವರ್ಮಾ ಹೇಳಿದರು. ಕಾಲೇಜಿನ ‘ಇಕೋ ಕ್ಲಬ್’ ವತಿಯಿಂದ ವಿದ್ಯಾರ್ಥಿಗಳಿಗೆ ಯಾಂತ್ರೀಕೃತ ಭತ್ತದ ನಾಟಿಯ ಪ್ರಾತ್ಯಕ್ಷಿಕೆಯನ್ನು ಉದ್ಘಾಟಿಸಿ, ಚಾಲನೆ ನೀಡಿ ಮಾತನಾಡಿದರು. ಕಾಲೇಜಿನ ವಿದ್ಯಾರ್ಥಿಗಳು ಸುಮಾರು 28 ದಿನಗಳ ಹಿಂದೆ ಭತ್ತವನ್ನು ಬಿತ್ತನೆ ಮಾಡಿ ಬಂದಿದ್ದು ಸಸಿ ರೂಪ ಪಡೆದ ಭತ್ತವನ್ನು ಗದ್ದೆಯಲ್ಲಿ ಯಂತ್ರದ ಮೂಲಕ ನಾಟಿ ಮಾಡುವ ವಿಧಾನವನ್ನು ತೋರಿಸಿಕೊಡಲಾಯಿತು. ಕಾಲೇಜಿನ ‘ಇಕೋ ಕ್ಲಬ್ ‘ಪರಿಸರ ಸಂಬಂಧಿ ಹಲವಾರು ವಿಭಿನ್ನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ವಿದ್ಯಾರ್ಥಿಗಳಿಗೆ ಪರಿಸರ ಪ್ರೇಮ ವೃದ್ಧಿಸುತ್ತಿರುವುದು ಶ್ಲಾಘನೀಯ. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಸುನಿಲ್ ಪಂಡಿತ್ ಇಕೋ ಕ್ಲಬ್ ನ ಸಂಯೋಜಕಿ ವಾಣಿ ಎಂ.ಎ ಜೀವಶಾಸ್ತ್ರ ಉಪನ್ಯಾಸಕ ಪ್ರದೀಪ್,ಗಣಿತ ಉಪನ್ಯಾಸಕಿ ಶ್ರೀಮತಿ ಧನಲಕ್ಷ್ಮೀ ಉಪಸ್ಥಿತರಿದ್ದರು.

Leave a comment

ಕಾರ್ಗಿಲ್ ವಿಜಯ ದಿವಸ ಆಚರಣೆ

ಯುದ್ಧಭೂಮಿಯಲ್ಲಿ ಭಾರತಾಂಬೆಯ ಸೇವೆಗೆ ತಮ್ಮನ್ನು ಸಮರ್ಪಿಸಿಕೊಂಡ ಧೀರರನ್ನು ಸ್ಮರಿಸುವುದು ನಮ್ಮ ಕರ್ತವ್ಯ. ಒಬ್ಬೊಬ್ಬ ವೀರನ ಒಂದೊಂದು ಕಥೆಯು ರೋಚಕ,ಮೈನವೀರೇಳಿಸುವಂತದ್ದು. ತಮ್ಮ ವೈಯಕ್ತಿಕ ಬದುಕಿನ ಸುಖಗಳನ್ನೆಲ್ಲಾ ತೊರೆದು ದೇಶಕ್ಕಾಗಿ ಮುಡಿಪಾಗಿಡುವ ಬದುಕು ಸೈನಿಕನದ್ದು. ಸೈನ್ಯದಲ್ಲಿ ಜೊತೆಗಿದ್ದವರು ನಮ್ಮ ಕೈಯಲ್ಲೇ,ಎದುರಲ್ಲೇ ಪ್ರಾಣ ತ್ಯಾಗ ಮಾಡಿರುವ ದೃಶ್ಯಗಳು ಇನ್ನೂ ಮಾಸದಂತಿದೆ. ದೇಶ ಸೇವೆಯೇ ಭಗವಂತನ ಸೇವೆಯೆಂದು ಪ್ರಾಮಾಣಿಕವಾಗಿ ಸೇವೆ ಮಾಡಿದ ತೃಪ್ತಿ ನಮಗಿದೆ. ನಮ್ಮ ಉಸಿರಿರುವವರೆಗೆ ಬೇರೆ ಬೇರೆ ರೂಪದಲ್ಲಿ ದೇಶಕ್ಕಾಗಿ ಸೇವೆ ಮಾಡೋ ಅವಕಾಶವಿದ್ದು, ಸದುಪಯೋಗಪಡಿಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಮಾಜಿ ಸೈನಿಕ ಶ್ರೀಯುತ ಕಾಂಚೋಡು ಗೋಪಾಲಕೃಷ್ಣ ಭಟ್ ಹೇಳಿದರು.

ಕಾಲೇಜಿನಲ್ಲಿ ನಡೆದ ‘ಕಾರ್ಗಿಲ್ ವಿಜಯ ದಿವಸ’ ಆಚರಣೆಯ ಮುಖ್ಯ ಅತಿಥಿಯಾಗಿ ಆಗಮಿಸಿ ತಾವು ಸೈನಿಕನಾಗಿದ್ದಾಗ ಮೆರೆದ ಸಾಹಸವನ್ನು ಎಳೆ ಎಳೆಯಾಗಿ ಬಿಚ್ಚಿ ವಿದ್ಯಾರ್ಥಿಗಳಿಗೆ ವಿವರಿಸಿದರು.’ಜೈ ಜವಾನ್ ಜೈ ಕಿಸಾನ್ ನನ್ನ ಮೂಲ ಮಂತ್ರವಾಗಿದೆ ನಿವೃತ್ತಿ ಬಳಿಕ ಕೃಷಿಕನಾಗಿದ್ದೇನೆ ಎಂದರು. ಕಾರ್ಯಕ್ರಮದಲ್ಲಿ ಅತಿಥಿಯಾಗಿದ್ದ ಕಾಲೇಜಿನ ದೈಹಿಕ ಶಿಕ್ಷಕ ಹಾಗೂ ಮಾಜಿ ಸೈನಿಕ ಲಕ್ಷ್ಮಣ್ ಜಿ.ಡಿಯವರು ಕಾರ್ಗಿಲ್ ಬಗ್ಗೆ ಪೂರ್ಣ ಮಾಹಿತಿ ನೀಡಿದರು. ಕಾರ್ಗಿಲ್ ಕದನ ಸಮಯ ಅಲ್ಲೇ ಇದ್ದ ತಮ್ಮ ಅನುಭವ ಹಂಚಿಕೊಂಡರು.

ಇನ್ನೊರ್ವ ಅತಿಥಿಯಾಗಿದ್ದ ಕಾಲೇಜಿನ ನಿಲಯ ಪಾಲಕರು ಹಾಗೂ ಮಾಜಿ ಸೈನಿಕರಾದ ವಿಶ್ವನಾಥ್ ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷ ಸ್ಥಾನ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಸುನಿಲ್ ಪಂಡಿತ್ ಅವರು ಅನ್ನ ಕೊಟ್ಟ ರೈತ ದೇಶಕ್ಕೆ ದುಡಿವ ಯೋಧನನ್ನು ಯಾವತ್ತೂ ಮರೆಯಬಾರದು, ತಮ್ಮ ಮನೋಬಲವನ್ನು ಗೆದ್ದು ಹೋರಾಡುವ ಸೈನಿಕ ಯಾವತ್ತೂ ನಮಗೆ ಮಾದರಿ ಎಂದರು.

ವೇದಿಕೆಯಲ್ಲಿ ಉಪಪ್ರಾಂಶುಪಾಲರಾದ ಮನೀಷ್ ಕುಮಾರ್ ಉಪಸ್ಥಿತರಿದ್ದರು. ಕಾಲೇಜು ವತಿಯಿಂದ ವೇದಿಕೆಯಲ್ಲಿದ್ದ ಮಾಜಿ ಸೈನಿಕರನ್ನು ಗೌರವ ಪೂರ್ವಕವಾಗಿ ಸನ್ಮಾನಿಸಲಾಯಿತು. ದೇಶಕ್ಕಾಗಿ ಹೋರಾಡಿ ಮಡಿದ ಸೈನಿಕರಿಗೆ ಮೌನ ಪ್ರಾರ್ಥನೆ ಮಾಡಿ ಗೌರವ ಸೂಚಿಸಲಾಯಿತು. ಸಂಸ್ಕೃತ ಉಪನ್ಯಾಸಕರಾದ ಮಹೇಶ್ಎಸ್.ಎಸ್ ನಿರೂಪಿಸಿದರು. ವಿದ್ಯಾರ್ಥಿ ನಾಯಕ ಹರ್ಷಿತ್ ವಂದಿಸಿದರು.

Leave a comment

ವೀರೇಂದ್ರ ಹೆಗ್ಗಡೆ ವಿರಚಿತ ಪುಸ್ತಕಗಳ ಪ್ರದರ್ಶನ

ಪುಸ್ತಕಗಳು ಜ್ಞಾನದ ಕೈದೀವಿಗೆ. ದೃಶ್ಯ ಶ್ರವ್ಯ ಮಾಧ್ಯಮಗಳಿಗೆಲ್ಲಾ ಪ್ರೇರಕ ಶಕ್ತಿ ಪುಸ್ತಕ. ಓದುವ, ಬರೆಯುವ ಹವ್ಯಾಸಗಳು ಅರೋಗ್ಯಯುತ ಬದುಕಿನ ಸೂತ್ರಗಳೂ ಹೌದು. ವೀರೇಂದ್ರ ಹೆಗ್ಗಡೆಯವರ ಬದುಕು – ಬರಹಗಳೆಲ್ಲವೂ ಪಾರದರ್ಶಕ. ಉನ್ನತ ವಿಚಾರಗಳು,ಆಕಾಂಕ್ಷೆಗಳು ಬದುಕನ್ನು ಉನ್ನತೀಕರಿಸಬಲ್ಲದು. ಪೂಜ್ಯರು ತಮ್ಮ ಬದುಕಿನ ಮೂಲಕ ಸಾಧನೆ, ಆದರ್ಶ,ಹೃದಯವಂತಿಕೆ, ಬರಹಗಳ ಮೂಲಕ ಜ್ಞಾನ ವಿಚಾರಗಳ, ಮಾಹಿತಿಗಳ ಸಾಗರವನ್ನೇ ಉಣಬಡಿಸಿದ್ದಾರೆ ಅಂತಹ ಸುಮಾರು 44 ಪುಸ್ತಕಗಳು ನಿಮ್ಮ ಮುಂದಿದೆ ಓದಿ ತಿಳಿದುಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವಸತಿ ಪದವಿಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ವೀರೇಂದ್ರ ಹೆಗ್ಗಡೆ ವಿರಚಿತ ಸುಮಾರು 44 ‘ಪುಸ್ತಕಗಳ ಪ್ರದರ್ಶನ’ವನ್ನು ಉದ್ಘಾಟಿಸಿದ ಸಂಸ್ಥೆಯ ವಿದ್ಯಾರ್ಥಿ ಕ್ಷೇಮ ಪಾಲನ ಅಧಿಕಾರಿಯಾಗಿರುವ ಶ್ರೀಯುತ ಸೋಮಶೇಖರ ಶೆಟ್ಟಿಯವರು ಮಾತನಾಡಿದರು. ವಿದ್ಯಾರ್ಥಿದೆಸೆಯಲ್ಲಿ ಓದುಗಾರಿಕೆಗೆ ಹೆಚ್ಚಿನ ಒತ್ತು ನೀಡಿ. ಸಾಹಿತ್ಯದ ಕೃಷಿಗೆ ಖಾವಂದರು ಪ್ರಾರಂಭದಿಂದಲೂ ಉತ್ತೇಜನ ನೀಡುತ್ತಾ ಬಂದಿದ್ದಾರೆ.ಅವರ ಸಾಧನೆಗಳು ಇಂದು ಮಾತಾಗಿದ್ದು ಮನ್ನಣೆ ಪಡೆದಿದೆ ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಸುನಿಲ್ ಪಂಡಿತ್ ಹೇಳಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ತಯಾರಿಸಿದ ಕಾಲೇಜಿನ ಬಿತ್ತಿಪತ್ರಿಕೆಯನ್ನು ಅನಾವರಣಗೊಳಿಸಲಾಯಿತು. ವೇದಿಕೆಯಲ್ಲಿ ರತ್ನಮಾನಸದ ನಿಲಯ ಪಾಲಕರಾದ ಶ್ರೀಯುತ ಯತೀಶ್ ಹಾಗೂ ಕಾಲೇಜಿನ ಗ್ರಂಥಪಾಲಕರಾದ ಗಿರಿಧರ್ ಉಪಸ್ಥಿತರಿದ್ದರು.ಕಾರ್ಯಕ್ರಮವನ್ನು ಕಾಲೇಜಿನ ಸಂಸ್ಕೃತ ವಿಭಾಗದ ಉಪನ್ಯಾಸರಾದ ಮಹೇಶ್ ಎಸ್.ಎಸ್ ನಿರೂಪಿಸಿ ವಂದಿಸಿದರು.

Leave a comment

ವಿವಿಧ ಸಂಘಗಳ ಉದ್ಘಾಟನ ಕಾರ್ಯಕ್ರಮ

ವಿದ್ಯಾರ್ಥಿ ಜೀವನ ಸುವರ್ಣಮಯವೆಂದು ಅರಿವಾಗೋದು ಶ್ರಮಪಟ್ಟು ಕಲಿತು ಸಾಧನೆ ಮಾಡಿದ ನಂತರವೇ. ಈ ಅವಧಿಯಲ್ಲಿ ದಾರಿ ತಪ್ಪಿಸುವ ಮೂಲಗಳು ಬಹಳ ಇದೆ ವಾಟ್ಸಪ್ಪ್, ಫೇಸ್ಬುಕ್,ಇನ್ಸ್ಟಾಗ್ರಾಮ್ ನಂತ ಮಾರಕ ದಾಳಿಗಳಿಂದ ನಮ್ಮನ್ನು ರಕ್ಷಿಸಿಕೊಳ್ಳೋ ಅನಿವಾರ್ಯತೆ ಇದೆ ಕಲಿಕೆ ಹೊರತು ಪಡಿಸಿ ಉಳಿದ ಆಕರ್ಷಣೆಯೆಂಬ ಭ್ರಮಲೋಕದಿಂದ ಹೊರಬನ್ನಿ, ಕ್ರಿಯಾಶೀಲ, ವೈಜ್ಞಾನಿಕ ಮನಸ್ಥಿತಿ ಬೆಳೆಸಿಕೊಳ್ಳಿ. ನಿತ್ಯ ಪತ್ರಿಕೆ, ಪುಸ್ತಕ ಓದುವ ಹವ್ಯಾಸ ಅಭ್ಯಾಸ ರೂಡಿಸಿಕೊಳ್ಳಿ.ಮೆದುಳನ್ನ ಚುರುಕುಗೊಳಿಸೋ ಚೆಸ್, ಸುಡೋಕೋ, ಪದಬಂಧಗಂತಹ ಆಟಗಳಲ್ಲಿ ತೊಡಗಿಕೊಳ್ಳಿ ಎಂದರು.

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವಸತಿ ಪದವಿಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ‘ ವಿವಿಧ ಸಂಘಗಳ ಉದ್ಘಾಟನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ವಿವೇಕಾನಂದ ಕಾಲೇಜಿನ ಭೌತಶಾಸ್ತ್ರ ಸಹಾಯಕ ಪ್ರಾಧ್ಯಾಪಕ ಡಾ| ಶ್ರೀಶ ಭಟ್ ಮಾತನಾಡಿದರು. ವಿವಿಧ ಸಂಘಗಳು ಕ್ರಿಯಾಶೀಲವಾಗಿ ಉತ್ತಮ ವಿಭಿನ್ನ ಕಾರ್ಯಕ್ರಮಗಳನ್ನ ಸಂಘಟಿಸುವಂತಾಗಲಿ,ಶಿಸ್ತು ಎಲ್ಲದಕ್ಕೂ ಮಾನದಂಡವಾಗಲಿ ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಸುನಿಲ್ ಪಂಡಿತ್ ಹೇಳಿದರು.

ವಿಜ್ಞಾನ ಸಂಘದ ಸಂಯೋಜಕರಾದ ರಮೇಶ್ ಬಾಬು ಪರಿಸರ ಸಂಘದ ಸಂಯೋಜಕರಾದ ವಾಣಿ ಎಂ.ಎ.ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾಲೇಜಿನ ಇಂಗ್ಲೀಷ್ ಉಪನ್ಯಾಸಕರಾದ ಪಾರ್ಶ್ವನಾಥ್ ನಿರೂಪಿಸಿ,ವಂದಿಸಿದರು

Leave a comment