ಸ್ಪರ್ಧಾಸ್ಪೂರ್ತಿಯ ಹುಮ್ಮಸ್ಸಿನೊಂದಿಗೆ ಸೌಹಾರ್ದತೆ, ಭಾತೃತ್ವ ಭಾವನೆ ಬೆಳೆಸುವುದರೊಂದಿಗೆ ನಮ್ಮ ಮಾನಸಿಕ ದೈಹಿಕ ಸಮತೋಲನವನ್ನು ಕಾಪಾಡಿಕೊಳ್ಳುವಲ್ಲಿ ಕ್ರೀಡೆ ಸಹಕಾರಿಯಾಗಿದೆಯೆಂದು, ಮುಖ್ಯ ಅತಿಥಿಗಳಾಗಿ ಆಗಮಿಸಿದ ಎಸ್.ಡಿ.ಎಂ. ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ಪ್ರಮೋದ್ ಕುಮಾರ್ ಜೈನ್ ಕ್ರೀಡಾಕೂಟವನ್ನು ಉದ್ಘಾಟಿಸಿ, ಶುಭಾಶಯವನ್ನು ಕೋರಿದರು.
ಕಾಲೇಜಿನ ಸಂಸ್ಥೆಯ ಹಿರಿಯ ಕ್ಷೇಮಪಾಲನಾ ಅಧಿಕಾರಿಯಾಗಿರುವ ಸೋಮಶೇಖರ್ ಶೆಟ್ಟಿ ಅವರು ಮಾತನಾಡಿ ಸೋಲು ಗೆಲುವುಗಳ ಲೆಕ್ಕಾಚಾರವಿಲ್ಲದೇ ವಿದ್ಯಾರ್ಥಿಗಳು ಸಮಾನಭಾವದೊಂದಿಗೆ ಒಗ್ಗಟ್ಟಿನಿಂದ ಆಡಿಯೆಂದು ಕ್ರೀಡಾಕೂಟಕ್ಕೆ ಶುಭ ಕೋರಿದರು. ಕ್ರೀಡೆ ಕಲಿಕೆಗೆ ಪೂರಕವಾದದ್ದು, ಏಕಾಗ್ರತೆಯೊಂದಿಗೆ ಕಲಿಕೆ ಸಾಧ್ಯವಾಗಲು ಪಠ್ಯದ ಜೊತೆಗೆ ಆಟೋಟಗಳು ಮಹತ್ತರವಾದ ಪಾತ್ರವನ್ನು ವಹಿಸುವುದು. ಎಂದು ಕ್ರೀಡಾಕೂಟದ ಅಧ್ಯಕ್ಷ ಸ್ಥಾನವನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಸುನಿಲ್ ಪಂಡಿತ್ ನುಡಿದರು. ಕ್ರೀಡಾಕೂಟಕ್ಕೂ ಮೊದಲು ಎಸ್ .ಡಿ .ಎಮ್. ಆಂಗ್ಲ ಮಾಧ್ಯಮ ಶಾಲಾ ಮಕ್ಕಳ ಬ್ಯಾಂಡ್ ಸೆಟ್ ನೊಂದಿಗೆ ನಡೆದ ಪಥಸಂಚಲನ ಗಮನ ಸೆಳೆಯಿತು . ಸುಮಾರು 20ಕ್ಕೂ ಮಿಕ್ಕಿದ ಆಟೋಟ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ಸಿಬ್ಬಂದಿಗಳು ಲವಲವಿಕೆಯಿಂದ ಪಾಲ್ಗೊಂಡರು.
ತೀರ್ಪುಗಾರರಾಗಿ ವಿಶ್ವನಾಥ್, ಧರ್ಮೇಂದ್ರ, ಶೀನಪ್ಪ, ಪ್ರಸಾದ್ ಹಾಗೂ ಸಂಸ್ಥೆಯ ದೈಹಿಕ ಶಿಕ್ಷಕರ ತಂಡ ಸಹಕರಿಸಿತು. ವಿಜೇತರಿಗೆ ಪದಕ ಹಾಗೂ ಪ್ರಶಸ್ತಿ ಪತ್ರ ನೀಡಿ ಗೌವಿಸಲಾಯಿತು. ಉಪ ಪ್ರಾಂಶುಪಾಲರಾದ ಮನೀಶ್ ಕುಮಾರ್ ಸ್ವಾಗತಿಸಿದರು . ದೈಹಿಕ ಶಿಕ್ಷಕರಾದ ಲಕ್ಷ್ಮಣ್ ಜಿ.ಡಿ ವಂದಿಸಿದರು. ಉಪನ್ಯಾಸಕಿಯರಾದ ಶ್ರೀಮತಿ ಕವಿತಾ ಉಮೇಶ್, ಕುಮಾರಿ ಪ್ರಿಯ ನಿರೂಪಿಸಿದರು.

