Skip to content Skip to footer

ಸಮುದ್ರದ ನೀರ ರುಚಿಯ ನೋಡಲು ಹೇಗೆ ಸಾಧ್ಯವಿಲ್ಲವೋ,ಹಾಗೇ ಪೂಜ್ಯ ಖಾವಂದರ ಸಾಧನೆಗಳು ಮೊಗೆದಷ್ಟೂ ಮುಗಿಯದಿರುವಂಥದ್ದು. ಆದರ್ಶದ ಪ್ರತಿರೂಪ, ಸಾವಿರಾರು ಜೀವಗಳ ಬಾಳಿನ ಬೆಳಕು, ಸಂಸ್ಕಾರದ ನಡೆ ನುಡಿಯಲ್ಲೇ ಸಾರ್ಥಕತೆ ಕಂಡ ಅಭೂತಪೂರ್ವ ವ್ಯಕ್ತಿತ್ವ. ಇವರ ಜನಪರ ಕಾಳಜಿ ಹಾಗೂ ಸೂಕ್ಷ್ಮಮತೀಯ ಗುಣಗಳು ನಿಜಕ್ಕೂ ಅನುಕರಣೀಯ ಎಂದರು. ರಾಜಶ್ರೀ ಡಾ. ಡಿ ವೀರೇಂದ್ರ ಹೆಗ್ಗಡೆಯವರ 76ನೇ ಜನ್ಮ ದಿನದ ಪ್ರಯುಕ್ತ ನಡೆದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀನಿವಾಸ ರಾವ್ ಧರ್ಮಸ್ಥಳ ಇವರು ಹೆಗ್ಗಡೆಯವರ ಜೀವನ, ಸಾಧನೆಗಳ ಪರಿಚಯಿಸಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಸುನಿಲ್ ಪಂಡಿತ್ ಅವರು ಮಾತನಾಡಿ ಖಾವಂದರ ಸಾಧನೆಗಳು ಪ್ರೇರಣೆಯಾಗಲಿ, ಸಮಾಜಮುಖಿಯಾಗಿ ಬೆಳೆಯುವ ಪ್ರವೃತ್ತಿ ಒಡಮೂಡಿಸಿಕೊಳ್ಳಿಯೆಂದು ಪೂಜ್ಯರ ಜೀವನದ ಕೆಲವು ಘಟನೆಗಳನ್ನು ಉದಾಹರಿಸಿ ವಿದ್ಯಾರ್ಥಿಗಳಿಗೆ ತಿಳಿಸಿದರು. ಗಣಕಶಾಸ್ತ್ರ ಮತ್ತು ಟೆಕ್ನೋ ಕ್ಲಬ್ ನ ಹಾಗೂ ಜೀವಶಾಸ್ತ್ರ ಮತ್ತು ಇಕೋ ಕ್ಲಬ್ ಮುಖೇನ ಕಾಲೇಜಿನಲ್ಲಿ ಆಯೋಜಿಸಿದ್ದ ಹಲವಾರು ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಪ್ರಶಸ್ತಿ ವಿತರಿಸಲಾಯಿತು.

ವೇದಿಕೆಯಲ್ಲಿ ಉಪ ಪ್ರಾಂಶುಪಾಲರಾದ ಮನೀಶ್ ಕುಮಾರ್ ಉಪಸ್ಥಿತರಿದ್ದರು. ಗಣಕಶಾಸ್ತ್ರದ ಉಪನ್ಯಾಸಕರಾದ ಪವಿತ್ರಕುಮಾರ್ ವಂದಿಸಿದರು. ಕನ್ನಡ ಉಪನ್ಯಾಸಕಿ ಕವಿತಾ ಉಮೇಶ್ ನಿರೂಪಿಸಿದರು.