ಮುಂದಿನ ದಿನಗಳಲ್ಲಿ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಬಹು ಮುಖ್ಯ ಮಹತ್ವವನ್ನು ಪಡೆಯಲಿದೆ. ಈ ತಂತ್ರಜ್ಞಾನ ದಿಂದ ನಮ್ಮ ಕೆಲಸಗಳು ಸರಳಗೊಳ್ಳಲಿದೆ ಎಂದು ಯಸ್ ಡಿ ಯಂ ಐ ಟಿ ಕಾಲೇಜಿನ ಅಸಿಸ್ಟಂಟ್ ಪ್ರೊಫೆಸರ್ ಧವಳ್ ಜೈನ್ ಮಾಹಿತಿಯನ್ನು ನೀಡಿದರು.
ಯಸ್ ಡಿ ಯಂ ರೆಸಿಡೆನ್ಸಿಯಲ್ ಪಿ ಯು ಕಾಲೇಜಿನ ಕಂಪ್ಯೂಟರ್ ಸೈನ್ಸ್ ಹಾಗೂ ಟೆಕ್ನೋ ಕ್ಲಬ್ ನ ವತಿಯಿಂದ ನಡೆದ ಮಾಹಿತಿ ಕಾರ್ಯಾಗಾರದಲ್ಲಿ ಮಾತನಾಡುತ್ತ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ , ಮೆಷಿನ್ ಲರ್ನಿಂಗ್ ಮುಂತಾದ ವಿಷಯಗಳ ಬಗ್ಗೆ ಪ್ರಥಮ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಮಾಹಿತಿಯನ್ನು ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಸುನಿಲ್ ಪಂಡಿತ್ ರವರು , ವಿದ್ಯಾರ್ಥಿಗಳು ಕ್ರಿಯಾಶೀಲರಾಗಿ , ಈ ಕಾರ್ಯಕ್ರಮದ ಭಾಗವಾಗಿ ಇದರ ಸದುಪಯೋಗವನ್ನು ಪಡೆದು ಕೊಳ್ಳಬೇಕೆಂದು ತಿಳಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ದ್ವಿತೀಯ ಪಿಯುಸಿ ವಿದ್ಯಾರ್ಥಿ ಶಿವಂ ನಂದಕಿಶೋರ್ ನೆರವೇರಿಸಿದರು. ಕಾಲೇಜಿನ ಕಂಪ್ಯೂಟರ್ ಸೈನ್ಸ್ ಉಪನ್ಯಾಸಕ ಶ್ರೀ ಪವಿತ್ರ ಕುಮಾರ್ ಸ್ವಾಗತಿಸಿದರು. ಕಾಲೇಜಿನ ಉಪ ಪ್ರಾಂಶುಪಾಲ ಶ್ರೀ ಮನೀಷ್ ಕುಮಾರ್ ಹಾಗೂ ಸಯನ್ಸ್ ಕ್ಲಬ್ ಸಂಯೋಜಕ ಶ್ರೀ ರಮೇಶ್ ಬಾಬು ಉಪಸ್ಥಿತರಿದ್ದರು.

