ಕಾಲೇಜಿನ ವಿದ್ಯಾರ್ಥಿಗಳ ಬರಹ, ಲೇಖನ, ಚಿತ್ರಕಲೆಯಂತಹ ಪ್ರತಿಭೆಗಳ ಹೂರಣದ ಕನಸಿನ ಬುತ್ತಿ “ಸ್ಮೃತಿ” ದ್ವೈ ವಾರ್ಷಿಕ ಸಂಚಿಕೆಯನ್ನು ಪೂಜ್ಯ ಖಾವಂದರು ಬಿಡುಗಡೆಗೊಳಿಸಿ, ಶುಭ ಹಾರೈಸಿದರು. ಸಂಚಿಕೆಯನ್ನು ಅವಲೋಕಿಸಿ ಇನ್ನಷ್ಟು ವಿದ್ಯಾರ್ಥಿ ಪ್ರತಿಭೆಗಳು ಮುಂದಿನ ದಿನಗಳಲ್ಲಿ ಬೆಳಕಿಗೆ ಬರುವಂತಾಗಲಿಯೆಂದರು.
“ನ್ಯಾಷನಲ್ ಇನ್ನೋವೇಶನ್ ಫೌಂಡೇಶನ್” ಸಂಸ್ಥೆ ನಡೆಸುವ ‘ಮಾನಕ್’ ಪರೀಕ್ಷೆಯಲ್ಲಿ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ಮಂಜುನಾಥ್ ಆರ್ ಮಾಸನ್ನವರ್ ತಯಾರಿಸಿದ ಮಾದರಿ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ ಆಗಿದ್ದ ಹಿನ್ನಲೆಯಲ್ಲಿ ಪೂಜ್ಯ ಖಾವಂದರ ಶುಭ ಹಾರೈಕೆ ಹಾಗೂ ಆಶೀರ್ವಾದವನ್ನು ಪಡೆದನು. ಕಾಲೇಜಿನ ಪ್ರಾಂಶುಪಾಲರಾದ ಶ್ರೀಯುತ ಸುನಿಲ್ ಪಂಡಿತ್, ಉಪ ಪ್ರಾಂಶುಪಾಲರಾದ ಶ್ರೀಯುತ ಮನೀಶ್ ಕುಮಾರ್, ಭೌತಶಾಸ್ತ್ರ ವಿಭಾಗದ ಮುಖ್ಯಸ್ಥರಾದ ರಮೇಶ್ ಬಾಬು, ಇಂಗ್ಲೀಷ್ ಉಪನ್ಯಾಸಕರು ಹಾಗೂ “ಸ್ಮೃತಿ” ದ್ವೈ ವಾರ್ಷಿಕ ಸಂಚಿಕೆ ಸಂಯೋಜಕರಾದ ಪಾರ್ಶ್ವನಾಥ ಹೆಗ್ಡೆ ಉಪಸ್ಥಿತರಿದ್ದರು.

