ಕಾಲೇಜಿನಲ್ಲಿ ಕಲಿಕೆ ಜೊತೆ ಜೊತೆಗೆ ವಿದ್ಯಾರ್ಥಿಗಳ ವ್ಯಕ್ತಿತ್ವದ ಸರ್ವತೋಮುಖ ಬೆಳವಣಿಗೆಗೆ ಪೂರಕವಾದ ಹಲವಾರು ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿದ್ದು, ಈ ನಿಟ್ಟಿನಲ್ಲಿ , ಮುಂಡಾಜೆ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ಪುರುಷೋತ್ತಮ ಶೆಟ್ಟಿ, ಎಸ್.ಡಿ.ಎಂ ಸ್ನಾತಕೋತರ ಕಾಲೇಜಿನ ಮನ:ಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಅಶ್ವಿನಿ ಶೆಟ್ಟಿ ಹಾಗೂ ಸಿಂಧು ಇವರು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ, ವಿದ್ಯಾರ್ಥಿಗಳಿಗೆ ‘ಭಾಷಣ ಕಲೆ’ ಹಾಗೂ ‘ಜೀವನ ಕೌಶಲ್ಯ’ದ ಕುರಿತು ಕಾರ್ಯಗಾರವನ್ನು ನಡೆಸಿಕೊಟ್ಟರು. ಉತ್ತಮ ಭಾಷಣಕಾರರಾಗಲು ಬೇಕಾದ ಹಲವಾರು ಮಾರ್ಗೋಪಾಯಗಳನ್ನು ತಿಳಿಸಿಕೊಟ್ಟರು. ಬದುಕನ್ನು ಸುಂದರಗೊಳಿಸುವ ದಾರಿಗಳ ಕುರಿತಾಗಿ ಬಹಳಷ್ಟು ಉದಾಹರಣೆಗಳ ಮೂಲಕ ವಿವರಿಸಿದರು. ವಿದ್ಯಾರ್ಥಿಗಳು ಲವಲವಿಕೆಯಿಂದ ಪಾಲ್ಗೊಂಡರು.

