ವಿದ್ಯಾರ್ಥಿಗಳಲ್ಲಿ ಕಲಿಕೆಯ ಸಾಮರ್ಥ್ಯವನ್ನು ಹೆಚ್ಚಿಸುವ ಹಾಗೂ ಏಕಾಗ್ರತೆ ,ಆಸಕ್ತಿಯಿಂದ ಕಲಿಕೆಯನ್ನು ಹಿಡಿದಿಡುವ ನಾನ ರೀತಿಯ ತಂತ್ರ ವಿಧಾನಗಳಲ್ಲಿ ನೂತನ ಪರಿಕಲ್ಪನೆಯ ರೂಪದಲ್ಲಿ ಮೂಡಿಬಂದಿರುವ ‘ಇಂಟರ್ ಆಕ್ಟಿವ್ ಡಿಸ್ಪ್ಲೇ ಬೋರ್ಡ್’ ಕುರಿತು ಕಾಲೇಜಿನ ಉಪನ್ಯಾಸಕರಿಗೆ ವಿಶೇಷ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಕಾರ್ಯಗಾರದಲ್ಲಿ ‘ಸೆನ್ಸೆಸ್ ಎಲೆಕ್ಟ್ರಾನಿಕ್ಸ್ ಪ್ರಾಡಕ್ಟ್ ‘ನ ತರಬೇತಿದಾರರಾಗಿರುವ ಸುಮಿತ ಇವರು ನೂತನ ತಾಂತ್ರಿಕ ಬೋರ್ಡಿನ ಬಳಕೆಯ ವಿಧಾನಗಳನ್ನು ಪ್ರಾತ್ಯಕ್ಷಿಕೆ ಮೂಲಕ ವಿವರಿಸಿದರು. ಕಾಲೇಜಿನಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಅಳವಡಿಸಿದ ನೂತನ ಎಲೆಕ್ಟ್ರಾನಿಕ್ ಇಂಟರಾಕ್ಟಿವ್ ಡಿಸ್ಪ್ಲೇ ಬೋರ್ಡ್ ಉತ್ತಮ ತಂತ್ರಾಂಶಗಳನ್ನು ಹೊಂದಿದ್ದು ಅತ್ಯಂತ ಸರಳವಾಗಿ ಹಾಗೂ ಆಕರ್ಷಕವಾಗಿ ವಿದ್ಯಾರ್ಥಿಗಳಿಗೆ ಬೋಧಿಸುವ ಎಲ್ಲಾ ಅಂಶಗಳನ್ನು ಒಳಗೊಂಡಿದೆ. ತರಬೇತಿ ಕಾರ್ಯಗಾರದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಸುನಿಲ್ ಪಂಡಿತ್ ಹಾಗೂ ಎಲ್ಲಾ ಉಪನ್ಯಾಸಕ ವೃಂದದವರು ಉಪಸ್ಥಿತರಿದ್ದರು. ಗಣಕಶಾಸ್ತ್ರದ ಉಪನ್ಯಾಸಕರಾಗಿರುವ ಪವಿತ್ರ ಕುಮಾರ್ ಸ್ವಾಗತಿಸಿದರು, ಇಂಗ್ಲಿಷ್ ವಿಭಾಗದ ಉಪನ್ಯಾಸಕರಾಗಿರುವ ಪಾರ್ಶ್ವನಾಥ ಹೆಗಡೆ ವಂದಿಸಿದರು.

