ವಿದ್ಯಾರ್ಥಿ ಜೀವನ ಸುವರ್ಣಮಯವೆಂದು ಅರಿವಾಗೋದು ಶ್ರಮಪಟ್ಟು ಕಲಿತು ಸಾಧನೆ ಮಾಡಿದ ನಂತರವೇ. ಈ ಅವಧಿಯಲ್ಲಿ ದಾರಿ ತಪ್ಪಿಸುವ ಮೂಲಗಳು ಬಹಳ ಇದೆ ವಾಟ್ಸಪ್ಪ್, ಫೇಸ್ಬುಕ್,ಇನ್ಸ್ಟಾಗ್ರಾಮ್ ನಂತ ಮಾರಕ ದಾಳಿಗಳಿಂದ ನಮ್ಮನ್ನು ರಕ್ಷಿಸಿಕೊಳ್ಳೋ ಅನಿವಾರ್ಯತೆ ಇದೆ ಕಲಿಕೆ ಹೊರತು ಪಡಿಸಿ ಉಳಿದ ಆಕರ್ಷಣೆಯೆಂಬ ಭ್ರಮಲೋಕದಿಂದ ಹೊರಬನ್ನಿ, ಕ್ರಿಯಾಶೀಲ, ವೈಜ್ಞಾನಿಕ ಮನಸ್ಥಿತಿ ಬೆಳೆಸಿಕೊಳ್ಳಿ. ನಿತ್ಯ ಪತ್ರಿಕೆ, ಪುಸ್ತಕ ಓದುವ ಹವ್ಯಾಸ ಅಭ್ಯಾಸ ರೂಡಿಸಿಕೊಳ್ಳಿ.ಮೆದುಳನ್ನ ಚುರುಕುಗೊಳಿಸೋ ಚೆಸ್, ಸುಡೋಕೋ, ಪದಬಂಧಗಂತಹ ಆಟಗಳಲ್ಲಿ ತೊಡಗಿಕೊಳ್ಳಿ ಎಂದರು.
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವಸತಿ ಪದವಿಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ‘ ವಿವಿಧ ಸಂಘಗಳ ಉದ್ಘಾಟನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ವಿವೇಕಾನಂದ ಕಾಲೇಜಿನ ಭೌತಶಾಸ್ತ್ರ ಸಹಾಯಕ ಪ್ರಾಧ್ಯಾಪಕ ಡಾ| ಶ್ರೀಶ ಭಟ್ ಮಾತನಾಡಿದರು. ವಿವಿಧ ಸಂಘಗಳು ಕ್ರಿಯಾಶೀಲವಾಗಿ ಉತ್ತಮ ವಿಭಿನ್ನ ಕಾರ್ಯಕ್ರಮಗಳನ್ನ ಸಂಘಟಿಸುವಂತಾಗಲಿ,ಶಿಸ್ತು ಎಲ್ಲದಕ್ಕೂ ಮಾನದಂಡವಾಗಲಿ ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಸುನಿಲ್ ಪಂಡಿತ್ ಹೇಳಿದರು.
ವಿಜ್ಞಾನ ಸಂಘದ ಸಂಯೋಜಕರಾದ ರಮೇಶ್ ಬಾಬು ಪರಿಸರ ಸಂಘದ ಸಂಯೋಜಕರಾದ ವಾಣಿ ಎಂ.ಎ.ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾಲೇಜಿನ ಇಂಗ್ಲೀಷ್ ಉಪನ್ಯಾಸಕರಾದ ಪಾರ್ಶ್ವನಾಥ್ ನಿರೂಪಿಸಿ,ವಂದಿಸಿದರು

