ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗ ಹಾಗೂ ಟೆಕ್ನೋ ಕ್ಲಬ್ ವತಿಯಿಂದ ಮಂಜುಶ್ರೀ ಪ್ರಿಂಟರ್ಸ್ ಉಜಿರೆಗೆ ಭೇಟಿ ನೀಡಲಾಯಿತು. ಕಾಲೇಜಿನ ವಿದ್ಯಾರ್ಥಿಗಳು ಅಲ್ಲಿಗೆ ಭೇಟಿ ನೀಡಿ ಮುದ್ರಣ ವಿಭಾಗದಲ್ಲಿ ನಡೆಯುವ ಮುದ್ರಣ ಕಾರ್ಯ ಚಟುವಟಿಕೆಗಳ ಹಾಗೂ ಅಲ್ಲಿ ಉಪಯೋಗಿಸುವ ಅನೇಕ ಯಂತ್ರಗಳ ಬಗ್ಗೆ ಉಪಯುಕ್ತ ಮಾಹಿತಿಗಳನ್ನು ಅಲ್ಲಿನ ಸಿಬ್ಬಂದಿಗಳಿಂದ ಪಡೆದರು. ಅಲ್ಲಿನ ಕಾರ್ಯ ಚಟುವಟಿಕೆಗಳನ್ನು ವೀಕ್ಷಿಸಿದ ವಿದ್ಯಾರ್ಥಿಗಳು , ಮೊದಲ ಬಾರಿ ಈ ರೀತಿಯ ಮುದ್ರಣದ ಕಾರ್ಯಚಟುವಟಿಕೆಗಳ ಬಗ್ಗೆ ತಿಳಿದುಕೊಂಡೆವು ಎಂದರು.ಮುದ್ರಣದ ಬಗೆಗಿನ ಹಲವು ವೈಶಿಷ್ಟತೆಗಳ ಬಗ್ಗೆ ಸಿಬ್ಬಂದಿಗಳು ಬಹಳ ಅದ್ಭುತವಾಗಿ ವಿವರಿಸಿದರು.
ಮಂಜುಶ್ರೀ ಪ್ರಿಂಟರ್ಸ್ ನ ಮ್ಯಾನೇಜರ್ ಶೇಖರ್, ರವಿ ಹಾಗೂ ಇನ್ನಿತರ ಸಿಬ್ಬಂದಿಗಳು ಸಹಕರಿಸಿದರು. ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳೊಂದಿಗೆ ಕಾಲೇಜಿನ ಉಪ ಪ್ರಾಂಶುಪಾಲರಾದ ಮನೀಷ್ ಕುಮಾರ್, ಉಪನ್ಯಾಸಕರಾದ ಪವಿತ್ರ ಕುಮಾರ್, ಕೃಷ್ಣಪ್ರಸಾದ್ ಉಪಸ್ಥಿತರಿದ್ದರು.

