ವಿದ್ಯಾರ್ಥಿ ದೆಸೆಯಲ್ಲಿ ವೇದಿಕೆಗಳ ಸದುಪಯೋಗಪಡಿಸಿಕೊಂಡರೆ ಮುಂದಿನ ದಿನಗಳಲ್ಲಿ ವ್ಯಕ್ತಿತ್ವ ನಿರ್ಮಾಣಕ್ಕೆ ಮುಖ್ಯ ರಹದಾರಿಯೂ ಆದಾಗಬಹುದು, ಸೋಲು ಗೆಲುವುಗಳ ಲೆಕ್ಕಾಚಾರಕ್ಕಿಂತ ಭಾಗವಹಿಸುವಿಕೆಯ ಮನಸ್ಥಿತಿ ಆರೋಗ್ಯಕರವೆಂದು , ಎಸ್. ಡಿ. ಎಂ. ಪದವಿ ಕಾಲೇಜಿನ ಸಹ ಪ್ರಾಂಶುಪಾಲರಾದ ಎಸ್. ಏನ್. ಕಾಕತ್ಕರ್ ಹೇಳಿದರು. ಕಾಲೇಜಿನಲ್ಲಿ 2023-24 ರ ಶೈಕ್ಷಣಿಕ ವರ್ಷದಲ್ಲಿ ನಡೆದ ಸ್ಪರ್ಧೆಗಳಲ್ಲಿ ವಿಜೇತರಿಗೆ ಪ್ರಶಸ್ತಿ ವಿತರಣಾ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಪ್ರಶಸ್ತಿ ವಿತರಿಸಿದರು. ಸ್ಪರ್ಧಾತ್ಮಕ ಗುಣಗಳು ಗುರಿ ಮುಟ್ಟಲು ಪ್ರೇರಣೆ ಹಾಗೂ ಕಲಿಕೆಗೂ ಪೂರಕವೆಂದು ಕಾಲೇಜಿನ ಪ್ರಾಂಶುಪಾಲರಾದ ಸುನಿಲ್ ಪಂಡಿತ್ ಅವರು ಶುಭಾಶಯಗಳನ್ನು ತಿಳಿಸಿದರು. ವೇದಿಕೆಯಲ್ಲಿ ವಿದ್ಯಾರ್ಥಿ ನಾಯಕನಾದ ಹರ್ಷಿತ್ ಎ. ವಿ. ಕಾರ್ಯದರ್ಶಿ ವರುಣ್ ಕುಮಾರ್ ಹೆಚ್ .ಎಲ್, ಪ್ರಶಸ್ತಿ ನಿರ್ವಹಣಾಧಿಕಾರಿ ಹಾಗೂ ಗಣಕಶಾಸ್ತ್ರ ವಿಭಾಗದ ಉಪನ್ಯಾಸಕರಾಗಿರುವ ಪವಿತ್ರ ಕುಮಾರ್ ಇವರು ಉಪಸ್ಥಿತರಿದ್ದರು.
ಸಾಂಸ್ಕೃತಿಕ ಸ್ಪರ್ಧಾ ಪ್ರಶಸ್ತಿಗಳ ಪಟ್ಟಿಯನ್ನು ಕಾಲೇಜಿನ ಇಂಗ್ಲೀಷ್ ವಿಭಾಗದ ಉಪನ್ಯಾಸಕರು ಹಾಗೂ ಸಾಂಸ್ಕೃತಿಕ ಸಮಿತಿಯ ಸದಸ್ಯರು ಆಗಿರುವ ಪಾರ್ಶ್ವನಾಥ ಹೆಗ್ಡೆ ವಾಚಿಸಿದರು. ಕ್ರೀಡಾ ಸ್ಪರ್ಧಾ ವಿವರಗಳನ್ನು ಕಾಲೇಜಿನ ದೈಹಿಕ ಶಿಕ್ಷಕರಾದ ಲಕ್ಷ್ಮಣ್ ಜಿ. ಡಿ. ವಾಚಿಸಿದರು. ಭೌತಶಾಸ್ತ್ರ ಉಪನ್ಯಾಸಕರಾದ ವಿಕ್ರಂ. ಪಿ ಸ್ವಾಗತಿಸಿದರು. ಸಾಯನ ಶಾಸ್ತ್ರ ಉಪನ್ಯಾಸಕಿ ಚೈತ್ರ ಪ್ರಭು ವಂದಿಸಿದರು. ಇಂಗ್ಲೀಷ್ ವಿಭಾಗ ಮುಖ್ಯಸ್ಥೆ ಭವ್ಯಶ್ರೀಯವರು ನಿರೂಪಿಸಿದರು.

