ಪೂಜ್ಯ ಖಾವಂದರ ಸಾಧನೆ ಗಳನ್ನು ವಿವರಿಸುವುದೆಂದರೆ ಸಮುದ್ರದಿಂದ ಒಂದು ಪಾತ್ರೆಯಲ್ಲಿ ನೀರು ತೆಗೆದಂತೆ,ಅವರ ಕೆಲಸಗಳೇ ಸಾಧನೆಯಾಗಿ ಮನೆ ಮಾತಾಗಿದೆ. ಅವರು ಹಾಕಿಕೊಟ್ಟ ಮಾರ್ಗ ಪ್ರೇರಕ ಪೂರಕ ಸ್ಫೂರ್ತಿದಾಯಕ. ಅವರು ತಮ್ಮನ್ನು ಸಮಾಜದ ಏಳ್ಗೆಗಾಗಿಯೇ ತೊಡಗಿಸಿಕೊಂಡಿದ್ದಾರೆ. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಹೊಸತನದೊಂದಿಗೆ ನಿರಂತರ ಕಾರ್ಯ ಪ್ರವೃತರಾಗಿರುವುದು ಅನಿವಾರ್ಯ ಹಾಗೂ ಅಗತ್ಯ. ಇದನ್ನು ಮನಗಂಡೇ ಅನೇಕ ಹೊಸ ಹೊಸ ಯೋಜನೆಗಳ ಮೂಲಕ ನಾಡನ್ನು ಕಟ್ಟುವ ಕಾರ್ಯ ಮಾಡುತ್ತಿದ್ದಾರೆ. ಪೂಜ್ಯರ ಹುಟ್ಟುಹಬ್ಬವನ್ನು ಅವರ ಸಾಧನೆಗಳ ಕುರಿತಾದ ಸ್ಪರ್ಧೆಗಳನ್ನು ಏರ್ಪಡಿಸಿ ವಿಶೇಷ ರೀತಿಯಲ್ಲಿ ಆಚರಿಸಿದ ಕಾಲೇಜಿನ ಕಾರ್ಯ ಶ್ಲಾಘನೀಯ ಎಂದ ಶ್ರೀಮತಿ ಸೋನಿಯಾವರ್ಮಾ ಅವರು ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಿ ಶುಭಾಶಯ ಕೋರಿದರು.
ಪೂಜ್ಯ ಹೆಗ್ಗಡೆಯವರ ಬದುಕು ತಮ್ಮ ಜೀವನಕ್ಕೆ ದಾರಿದೀಪವಾದ ಬಗೆಯನ್ನು ನೈಜ ಅನುಭವಗಳ ಮೂಲಕ ಕಾಲೇಜಿನ ಪ್ರಾಂಶುಪಾಲರಾದ ಶ್ರೀಯುತ ಸುನಿಲ್ ಪಂಡಿತರು ವಿಧ್ಯಾರ್ಥಿಗಳೊಂದಿಗೆ ಹಂಚಿ ಕೊಂಡರು. ಇದೇ ಸಂದರ್ಭದಲ್ಲಿ ಗ್ರಂಥಾಲಯವನ್ನು ಸಮರ್ಥವಾಗಿ ಬಳಸುವ ವಿದ್ಯಾರ್ಥಿಗೆ 5 ಸಾವಿರ ನಗದು ಬಹುಮಾನ ವನ್ನು. ಕೀರ್ತಿಶೇಷ ಯಶೋವರ್ಮರ ಸ್ಮರಣಾರ್ಥ ಘೋಷಿಸಲಾಯಿತು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿಗಳಾದ ಶ್ರೀಯುತ ಸೋಮಶೇಖರ ಶೆಟ್ಟಿ, ಶ್ರೀಯುತ ಯುವರಾಜ ಪೂವಣಿ, ಎಸ್. ಡಿ. ಎಂ ಕನ್ನಡ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಸುರೇಶ್ ಹಾಗೂ ಸಿ. ಬಿ. ಎಸ್. ಸಿ ಪ್ರಾಂಶುಪಾಲರಾದ ಶ್ರೀ ಮನಮೋಹನ್ ನಾಯಕ್ ಉಪಸ್ಥಿತರಿದ್ದರು. ಕಾಲೇಜಿನ ಗಣಿತಶಾಸ್ತ್ರ ಉಪನ್ಯಾಸಕಿಯಾಗಿರುವ ಶ್ರೀಮತಿ ಧನಲಕ್ಷ್ಮಿ ಅವರು ಸ್ವಾಗತಿಸಿದರು. ಭೌತಶಾಸ್ತ್ರ ವಿಭಾಗದ ಉಪನ್ಯಾಸಕಿ ಶ್ರೀಮತಿ ಭಾರತಿ ವಂದಿಸಿದರು. ಕನ್ನಡ ವಿಭಾಗದ ಉಪನ್ಯಾಸಕಿ ಕವಿತಾ ಉಮೇಶ್ ನಿರೂಪಿಸಿದರು.

